ರಾಯಚೂರು,ಏ24(Daijiworld News/AZM): ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯ ಪೇದೆ ಆಂಜನೇಯ ಅವರನ್ನು ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿನಿ ಸಾವಿಗೆ ಕಾರಣ ಎನ್ನಲಾದ ಆರೋಪಿ ಸುದರ್ಶನ ಯಾದವ್ನ ಮಾವನಾಗಿರುವ ಪೊಲೀಸ್ ಸಿಬ್ಬಂದಿ ಆಂಜನೇಯ ಮೃತ ವಿದ್ಯಾರ್ಥಿನಿಯ ಮೊಬೈಲ್ ಹಾಗು ವಾಹನದ ಕೀ ಅವರ ಪಾಲಕರಿಗೆ ಮುಂಚಿತವಾಗೇ ಹಿಂದಿರುಗಿಸಿದ್ದರು. ಹಾಗೂ ಮೃತ ಮಧು ಪಾಲಕರು ಆಂಜನೇಯರಿಂದ ಆರೋಪಿಯ ರಕ್ಷಣೆಯಾಗುವ ಸಾಧ್ಯತೆ ಬಗ್ಗೆ ಆರೋಪ ಮಾಡಿದ್ದರು.
ಈ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ಅವರು ಅಮಾನತು ಆದೇಶ ಹೊರಡಿಸಿದ್ದಾರೆ.