ಬೆಂಗಳೂರು, ಫೆ 02 (DaijiworldNews/HR): ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆಯು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ.
ರೈಲಿನಲ್ಲಿ ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರ ಮೊಬೈಲ್ ಸೌಂಡ್ ಜಾಸ್ತಿ ಮಾಡಿದರೆ, ಅನಾವಶ್ಯಕವಾಗಿ ರೈಲಿನಲ್ಲಿ ಲೈಟ್ಸ್ ಆನ್ ಮಾಡಿದರೆ, ಜೋರಾಗಿ ಮಾತನಾಡಿದರೆ ಅವರ ವಿರುದ್ಧ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
ಇನ್ನು ಸುರಕ್ಷತೆಯ ಪ್ರಯಾಣಕ್ಕೆ ಭಂಗ ಉಂಟು ಮಾಡುವವರನ್ನ ಪತ್ತೆ ಹಚ್ಚುವುದಕ್ಕೆ ಸೌತ್ ವೆಸ್ಟರ್ನ್ ರೈಲ್ವೆ ಅಧಿಕಾರಿಗಳು ರೈಲ್ವೆ ಪ್ರಯಾಣದುದ್ದಕ್ಕೂ ರಿಸರ್ವೇಶನ್ ಬೋಗಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.