ಮಹಾರಾಷ್ಟ್ರ, ಫೆ 02 (DaijiworldNews/SK): ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರು ಆತಂರಿಕ ತೃಪ್ತಿಗಾಗಿ ದುಡಿವುದು ಬಹಳ ಕಡಿಮೆ. ಕೈ ತುಂಬಾ ಸಂಬಳ ಬಂದರಂತೂ ನಂತರ ಏನನ್ನು ಸಾಧಿಸುವ ಗೋಜಿಗೆ ಹೋಗುದಿಲ್ಲ. ಆದರೆ ಇಲ್ಲೊಬ್ಬರು ಯುಪಿಎಸ್ ಸಿ ಪರೀಕ್ಷೆ ಬರೆಯಬೆಕೇಂಬ ಅವರಲಿದ್ದ ಕನಸು ಉತ್ತಮ ಕೆಲಸವನ್ನು ತೊರೆದು, ಯುಪಿಎಸ್ ಸಿ ಪರೀಕ್ಷೆ ಎದುರಿಸಿ ಎರಡನೇ ಯತ್ನದಲ್ಲಿ ಅಖಿಲ ಭಾರತ 13 ರ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಪ್ರಿಯಂವದಾ ಅಶೋಕ್ ಮ್ಹದ್ದಾಲ್ಕರ್ ಯಶೋಗಾಥೆ.
ಮೂಲತಃ ಮಹಾರಾಷ್ಟ್ರದ ರತ್ನಗಿರಿಯವರಾದ ಪ್ರಿಯಂವದಾ ಅಶೋಕ್ ಮ್ಹದ್ದಾಲ್ಕರ್ ಅವರ ತಂದೆ ಮಹಾರಾಷ್ಟ್ರದ ರಾಜ್ಯ ಸರ್ಕಾರಿ ಪಿಎಸ್ಯುನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಿಯಂವದಾ ಅವರಿಗೆ ಐಎಎಸ್ ಅಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಕಾರಣ ತನ್ನ ತಂದೆಯಿಂದ ಸಿವಿಲ್ ಸರ್ವೀಸ್ಗೆ ಸ್ಫೂರ್ತಿ ಪಡೆದರು.
ಪ್ರಿಯಂವದಾ ಅವರು ಆರಂಭದಲ್ಲಿ ಮುಂಬೈನ ವೀರಮಾತಾ ಜೀಜಾಬಾಯಿ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. ನಂತರ ಐಐಎಂ ಬೆಂಗಳೂರಿನಲ್ಲಿ ತನ್ನ ಎಂಬಿಎ ಮುಗಿಸಿ, ಹಣಕಾಸು ಸೇವಾ ಕ್ಷೇತ್ರಕ್ಕೆ ಪ್ರವೇಶಿಸಿ ಹೂಡಿಕೆ ಬ್ಯಾಂಕಿಂಗ್ನಲ್ಲಿ ಆರು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಆದರೆ ಇದರ ನಡುವೆ ಐಎಎಸ್ ಅಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಬಾಲ್ಯದಿಂದಲೂ IAS ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸಾಗಿಸಲು ತನ್ನ ಕೆಲಸವನ್ನು ತೊರೆದರು.
ಇನ್ನು UPSC ಅಧ್ಯಯನಕ್ಕಾಗಿ ಕೆಲಸ ತೊರೆದ ಅವರು, ಜುಲೈ 2020 ರಲ್ಲಿ ಆನ್ಲೈನ್ ಕಲಿಕೆ ಮತ್ತು ಸ್ವಯಂ-ಅಧ್ಯಯನವನ್ನು ಆರಿಸಿಕೊಂಡರು. ಆದರೆ ವಾಣಿಜ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಗಿರಲಿಲ್ಲ. ಇದರ ನಡುವೆ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದು ಮುಖ್ಯವಾಗಿತ್ತು. ಆದರೂ ಎಲ್ಲವೂ ಸರಿಸಮಾನಾಗಿ ನಿಭಾಯಿಸಿದ ಪ್ರಿಯಂವದಾ ಅವರು ಎರಡನೇ ಪ್ರಯತ್ನದಲ್ಲಿ 2023 ರಲ್ಲಿ UPSC ಅನ್ನು ಉತ್ತೀರ್ಣರಾಗುವ ಮೂಲಕ ಅಖಿಲ ಭಾರತ 13 ರ ರ್ಯಾಂಕ್ ಗಳಿಸಿದರು.
ಈ ಮೂಲಕ ಜೀವನದಲ್ಲಿ ಅದೆಷ್ಟು ಅಡೆತಡೆಗಳು ಎದುರಾದರು ಅದನ್ನು ಮೆಟ್ಟಿ ನಿಂತು ಛಲದಿಂದ ಎದುರಿಸಿದರೆ ಮಾತ್ರ ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಎನ್ನುವುದಕ್ಕೆ ಪ್ರಿಯಂವದಾ ಅಶೋಕ್ ಮ್ಹದ್ದಾಲ್ಕರ್ ಉದಾಹರಣೆಯಾಗಿದ್ದಾರೆ.