ಬೆಂಗಳೂರು,ಫೆ 02 (DaijiworldNews/ AK):ಶಾಸಕ ಬಾಲಕೃಷ್ಣ, ಕಾಂಗ್ರೆಸ್ ನಾಯಕ ಬಿ. ಶಿವರಾಂ ಹೇಳಿಕೆ ಅವರ ವೈಯಕ್ತಿಕವಾದದ್ದು. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ 50% ಕಮಿಷನ್ ಇದೆ ಎಂಬ ಶಿವರಾಂ ಹೇಳಿಕೆ ಹಾಗೂ ಗ್ಯಾರಂಟಿ ರದ್ದು ಮಾಡಲಾಗುತ್ತದೆ ಎಂಬ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಗಮನಕ್ಕೆ ಅವರು ತಂದಿದ್ದರೆ ಸಿಎಂ ಕ್ರಮ ತೆಗೆದುಕೊಳ್ತಾರೆ ಎಂದರು.
ಶಿವರಾಂ ಹೇಳಿಕೆ, ಬಾಲಕೃಷ್ಣ ಹೇಳಿಕೆಗಳು ವೈಯಕ್ತಿಕ ಹೇಳಿಕೆಗಳು. ಅವು ಪಕ್ಷದ ಹೇಳಿಕೆಗಳಲ್ಲ. ಅವರು ಏನೋ ಹೇಳಿರುತ್ತಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದರು.
ತುಮಕೂರಿನಿಂದ ಮುದ್ದ ಹನುಮೇಗೌಡ ಅವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಟಿಕೆಟ್ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಪಕ್ಷದಲ್ಲಿ ಯಾರಿಗೆ ತೀರ್ಮಾನ ಮಾಡಿ ಟಿಕೆಟ್ ಕೊಡ್ತಾರೋ ಅವರಿಗೆ ನಾವು ಕೆಲಸ ಮಾಡುತ್ತೇವೆ. ನಮ್ಮ ಅಭಿಪ್ರಾಯ ಪಕ್ಷಕ್ಕೆ ಹೇಳಿದ್ದೇವೆ ಎಂದಿದ್ದಾರೆ.