ಬಿಹಾರ, 03 (DaijiworldNews/PC): ಸಾಮಾನ್ಯ ವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಉತ್ತೀರ್ಣರಾಗಲು ಶಾಲಾ ಸಮಯದಿಂದಲೇ ಒಳ್ಳೆಯ ಅಂಕವನ್ನು ಪಡೆದವರಿಂದ ಮಾತ್ರವೇ ಸಾಧ್ಯ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತೇವೆ ಆದರೆ ಇವೆಲ್ಲದಕ್ಕೂ ವಿರುದ್ದವೆಂಬಂತೆ ಇಲ್ಲೊಬ್ಬರು 10 ನೇ ತರಗತಿಯಲ್ಲಿ ಅತೀ ಕಡಿಮೆ ಅಂಕ ಗಳಿಸಿ ಬಳಿಕ ಐಎಎಸ್ ಅಧಿಕಾರಿಯಾದ ಒಬ್ಬರ ಸಾಧನೆಯ ಯಶೋಗಾಥೆ ತಿಳಿಯೋಣ.
ಹೌದು ಇವರ ಹೆಸರು ಅವನಿಶ್ ಬಿಹಾರ ಮೂಲದ ಸಮಸ್ತಿಪುರ್ ಜಿಲ್ಲೆಯ ಕೆವಟ ಎಂಬ ಸಣ್ಣ ಹಳ್ಳಿಯಲ್ಲಿ, 1981 ರಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಇವರು, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿಯೇ ಓದಿದರು.
ಬಾಲ್ಯದಿಂದಲೇ ಇವರು ಕಲಿಕೆಯಲ್ಲಿ ಹಿಂದಿದ್ದರು ಹಾಗೂ ತಮ್ಮ 10ನೇ ತರಗತಿಯಲ್ಲಿ ಕೇವಲ ಶೇ.44 ಅಂಕಗಳಿಸಿದರು ಅಷ್ಟೇ ಅಲ್ಲದೇ ,ಪಿಯುಸಿ ಅಂಕಗಳು ಶೇಕಡ.65, ಪದವಿ ಅಂಕಗಳು ಶೇಕಡ.60.7. ಇಷ್ಟು ಕಡಿಮೆ ಅಂಕಗಳನ್ನು ಪಡೆದರು.
ಶಾಲಾ ಕಾಲೇಜು ಸಮಯದಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಅವರು, ಅದೇ ಅಂಕಗಳನ್ನು ತಮ್ಮ ಸ್ಪೂರ್ತಿಯಾಗಿಸಿಕೊಂಡರು ಹಾಗೂ ಹೆಚ್ಚು ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು, ಕಠಿಣ ಪರಿಶ್ರಮ ಹಾಕಿ, ಐಎಎಸ್ ಅಧಿಕಾರಿ ಆಗಲು ಪ್ರಯತ್ನವನ್ನು ಮಾಡಿದರು.
ಇವರು ಅತ್ಯಂತ ಕಠಿಣ ಶ್ರಮ ಹಾಗೂ ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಿ ಬಳಿಕ 2009 ರಲ್ಲಿ ಛತ್ತೀಸ್ಘಡ ಕೇಡರ್ನಲ್ಲಿ ಐಎಎಸ್ ಆಫೀಸರ್ ಆಗಿ ಸೇವೆಗೆ ಸೇರಿದವರು.
ಅವರ ಶೈಕ್ಷಣಿಕ ವಾಗಿ ಕಡಿಮೆ ಅಂಕ ಪಡೆದಿದ್ದರೂ ಬಳಿಕ ತನ್ನ ಹಠ ಹಾಗೂ ಛಲ ಬಿಡದೆ ಸಾಧನೆಯನ್ನು ಗೈದಿರುವುದು ಸ್ಪರ್ಥಾತ್ಮಕ ಪರೀಕ್ಷೆ ಬರೆಯುವ ಲಕ್ಷಾಂತರ ಜನರಿಗೆ ಅವರ ಅಂಕಗಳೇ ಐಎಎಸ್ ಓದಲು ಸ್ಫೂರ್ತಿ ನೀಡಿರುವುದಂತೂ ಖಂಡಿತಾ.