ಚನ್ನರಾಯಪಟ್ಟಣ,ಏ 25(Daijiworld News/MSP): ಕಾರಿನ ಕಿಟಕಿ ಗಾಜಿಗೆ ಕುತ್ತಿಗೆ ಸಿಲುಕಿ ಮೂರು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣದ ದೊಡ್ಡಗನ್ನಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ತುಮಕೂರು ಜಿಲ್ಲೆ ತುರುವೇಕರೆ ತಾಲೂಕು ದಂಡಿಶಿವರ ಗ್ರಾಮದ ಇಂದ್ರಾಣಿ ಉಮೇಶ್ ಅವರ ಮಗು ರತನ್ಶೆಟ್ಟಿ (3) ಎಂದು ಗುರುತಿಸಲಾಗಿದೆ
ಉಮೇಶ್ ಅವರ ಮಗು ರತನ್ ಅಜ್ಜನ ಮನೆಯಲ್ಲಿದ್ದು ಬುಧವಾರ ಬೆಳಗಿನ ಸಮಯದಲ್ಲಿ ಮಗುವಿನ ಸೋದರ ಮಾವ ತನ್ನ ಕಾರಿನಲ್ಲಿ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಕಾರಿನಲ್ಲಿ ಮಗುವನ್ನು ಬಿಟ್ಟು ತೆಂಗಿನ ಮರಕ್ಕೆ ನೀರು ಹಾಕುತ್ತಿರುವಾ ಮಗು ಕಾರಿನ ಕಿಟಕಿ ಬಾಗಿಲಿನಲ್ಲಿ ಕತ್ತು ಹೊರಹಾಕಿದೆ. ದುರಾದೃಷ್ಟಕ್ಕೆ ಈ ಸಂದರ್ಭ ,ಕಾರಿನ ಗಾಜಿನ ಸ್ವಿಚ್ ಮೇಲೆ ಮಗುವಿನ ಕೈ ಇಟ್ಟಿದ್ದರಿಂದ ತಕ್ಷಣವೇ ಕಿಟಕಿ ಗಾಜು ಮೇಲೇರಿ ಹೋಗಿ ಮಗುವಿನ ಕತ್ತಿಗೆ ಬಳಿ ಬಲವಾಗಿ ಸಿಲುಕಿಕೊಂಡಿದೆ. ಆಗಿದೆ. ಇದನ್ನು ಗಮನಿಸಿದ ಸೋದರ ಮಾವ ತಕ್ಷಣ ಆಸ್ಪತ್ರೆಗೆ ಕರೆ ತಂದರಾದರೂ ಚಿಕಿತ್ಸೆ ಫಲಕಾರಿಯಾದೆ ಮಗು ಸಾವನ್ನಪ್ಪಿದೆ.