ನವದೆಹಲಿ, ಫೆ 06 (DaijiworldNews/HR): ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪರೀಕ್ಷಾ ಪತ್ರಿಕೆಗಳ ಸೋರಿಕೆಯಂತಹ ಅಕ್ರಮ ಅಭ್ಯಾಸಗಳನ್ನು ತಡೆಯುವ ವಂಚನೆ ವಿರೋಧಿ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ.
ಸಾರ್ವಜನಿಕ ಪರೀಕ್ಷೆಗಳ ಮಸೂದೆಯನ್ನು ಈಗ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಇಲ್ಲಿ ಅಂಗೀಕಾರವಾದ ನಂತರ ಕಾನೂನಾಗುವ ಮೊದಲು ಒಪ್ಪಿಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾಗುತ್ತದೆ.
ಇನ್ನು ಈ ಮಸೂದೆಯ ಅಡಿಯಲ್ಲಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡುವವರು ಅಥವಾ ಉತ್ತರ ಪತ್ರಿಕೆಗಳನ್ನು ತಿರುಚುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ದಂಡ ವಿಧಿಸಲಾಗುತ್ತದೆ.