ಬೆಂಗಳೂರು,ಏ24(Daijiworld News/AZM):ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರುತ್ತಿದ್ದ ಬಿಜೆಪಿ ಶಾಸಕ ಇಂದು ಟ್ವಿಟ್ಟರ್ ಮೂಲಕ ಸಿದ್ದು ಅವರನ್ನು ಹಾಡಿಹೊಗಳಿದ್ದಾರೆ.
ಪತ್ರಕರ್ತೆ ಬರ್ಕಾ ದತ್ ಅವರು 2018ರ ಕರ್ನಾಟಕ ಚುನಾವಣೆಯ ಸಮಯದಲ್ಲಿ ವಾಷಿಂಗ್ಟನ್ ಪೋಸ್ಟ್ ಗೆ ಲೇಖನ ಬರೆದು ಟ್ವೀಟ್ ಮಾಡಿದ್ದರು.'ಕುರಿಯುವವನ ಮಗ ಮೋದಿಯನ್ನು ದಕ್ಷಿಣ ಭಾರತದಲ್ಲಿ ತಡೆಯಬಲ್ಲುರೆ?' ಎಂದು ಆ ಲೇಖನಕ್ಕೆ ತಲೆ ಬರಹ ನೀಡಿ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಪ್ರಾದೇಶಿಕತೆಯನ್ನು ಮುಖ್ಯವಾಗಿಟ್ಟುಕೊಂಡು ಎದುರಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದ್ದರು. ಈ ಟ್ವೀಟ್ಗೆ ಇಂದು ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಶಕ್ತಿಯಿಂದಲೇ ಬೆಳೆದವರು. ಅವರು ಜನರೇ ಬೆಳೆಸಿದ ವ್ಯಕ್ತಿ. ಅವರನ್ನ ಯಾಕೆ ಕುರಿಗಾಹಿ ಮಗನೆಂದು ಕರೆಯುತ್ತೀರಿ? ಈ ರೀತಿಯಾಗಿ ಕನ್ನಡಿಗರ ಬಗ್ಗೆ ದುರುದ್ದೇಶಪೂರ್ವಕವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.