ರಾಯಚೂರು,ಏ24(Daijiworld News/AZM):ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುದರ್ಶನ ಯಾದವ್ ನನ್ನು ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಆತನಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಸುದರ್ಶನ್ ಹಲವು ಹೇಳಿಕೆಗಳನ್ನು ನೀಡಿದ್ದಾನೆಯಾದರೂ, ಆತನ ಹೇಳಿಕೆಗಳ ಬಗ್ಗೆ ಹಲವು ಅನುಮಾನ ಮೂಡಿದೆ.
ವಿಚಾರಣೆ ವೇಳೆ ಆರೋಪಿ ಸುದರ್ಶನ್ ' ಪ್ರೀತಿ ಮಾಡಿದ್ದು ನಿಜ, ನಂತರ ನಮ್ಮಿಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ಕೊನೆಗೆ ನಾನು ಅವಳನ್ನು ಪೀಡಿಸೋದಕ್ಕೆ ಶುರು ಮಾಡಿದ್ದೆ, ಒಮ್ಮೆ ನಾನು ಆಕೆಗೆ ರಸ್ತೆಯಲ್ಲಿ ಹಲ್ಲೆ ಮಾಡುವಾಗ ಮಧು ತಂದೆಯ ಬಳಿ ಸಿಕ್ಕಿಬಿದ್ದಿದೆ. ಆ ವಿಚಾರಕ್ಕೆ ಅವಳು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆರೋಪಿಯು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.