ಒಡಿಶಾ, ಫೆ 08 (DaijiworldNews/ AK): ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ, ಜನರನ್ನು ನಂಬಿಸುತ್ತಿದ್ದಾರೆ ಅಷ್ಟೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮೂರನೇ ದಿನ ಭಾರತ್ ಜೋಡೊ ನ್ಯಾಯ ಯಾತ್ರೆಯ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ.ಅವರು ಗುಜರಾತ್ನಲ್ಲಿ ತೇಲಿ ಜಾತಿಯಲ್ಲಿ ಜನಿಸಿದ್ದಾರೆ.
2000 ರಲ್ಲಿ ತೇಲಿ ಸಮುದಾಯಕ್ಕೆ ಬಿಜೆಪಿಯಿಂದ ಒಬಿಸಿ ಟ್ಯಾಗ್ ನೀಡಲಾಯಿತು. ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ. ಇದೇ ಕಾರಣಕ್ಕೆ ಜಾತಿ ಗಣತಿ ನಡೆಸಲು ಬಿಡುವುದಿಲ್ಲ ಎಂದು ಆರೋಪಿಸಿದ್ದಾರೆ.ಮೋದಿ ಒಬಿಸಿ ವರ್ಗದವರೊಂದಿಗೆ ಕೈ ಕುಲುಕುವುದಿಲ್ಲ, ಆದರೆ ಬಿಲಿಯನೇರ್ಗಳನ್ನು ತಬ್ಬಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯು ಒಡಿಶಾದಲ್ಲಿ ರ್ಯಾಲಿ ಪೂರ್ಣಗೊಳಿಸಿ ಇಂದು ಛತ್ತೀಸ್ಗಡ್ ನ್ನು ಪ್ರವೇಶಿಸಲಿದೆ.