ಬೆಂಗಳೂರು, ಫೆ 08 (DaijiworldNews/HR): ನಾನು ಪಾರ್ಲಿಮೆಂಟ್ ಸದಸ್ಯತ್ವ ಕೇಳಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ತುಮಕೂರು ಕ್ಷೇತ್ರದ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ತುಮಕೂರು ಅಭಿವೃದ್ಧಿಗಾಗಿ ನಾನು ಶ್ರಮವಹಿಸಿದ್ದೇನೆ. ವರಿಷ್ಠರ ಆದೇಶವನ್ನು ನಾನು ಮೀರುವುದಿಲ್ಲ. ಆದರೆ ಪಾರ್ಲಿಮೆಂಟ್ ಸದಸ್ಯತ್ವ ಕೇಳಿದ್ದೇನೆ ಎಂದರು.
ಇನ್ನು ಕಳೆದ ಬಾರಿ ನನಗೆ ಸೋಲಾಗಿದೆ. ಆದರೆ ನನ್ನ ಕಾರ್ಯವೈಖರಿ ನೋಡಿ ಹೈಕಮಂಡ್ ಯಾವ ಕ್ಷೇತ್ರ ನೀಡಿದರೂ ನನಗೆ ತೊಂದರೆಯಿಲ್ಲ. ವರಿಷ್ಠರ ಆದೇಶವನ್ನು ನಾನು ಮೀರುವುದಿಲ್ಲ. ರಾಜೀವ್ ಚಂದ್ರಶೇಖರ್ ಅವರಿಗೆ ಪಾರ್ಲಿಮೆಂಟ್ ಸದಸ್ಯತ್ವ ಕೊಡದಿದ್ದರೆ ನನಗೆ ಕೊಡಿ ಎಂದಿದ್ದೇನೆ ಎಂದರು.
ನಾನು ತುಮಕೂರಿನಲ್ಲಿ ಕೆಲಸ ಮಾಡಿರುವುದನ್ನು ನೋಡಿ ನನ್ನ ಹೆಸರು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.