ನವದೆಹಲಿ, ಫೆ 08 (DaijiworldNews/HR): ಹೇಮಂತ್ ಸೊರೆನ್ ಅವರ ದೆಹಲಿ ನಿವಾಸದಿಂದ ವಶಪಡಿಸಿಕೊಳ್ಳಲಾದ ಬಿಎಂಡಬ್ಲ್ಯು ಕಾರು ಅವರದ್ದಲ್ಲ, ಕಾಂಗ್ರೆಸ್ನ ರಾಜ್ಯಸಭಾ ಸಂಸದರೊಬ್ಬರಿಗೆ ಸೇರಿದ್ದು ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.
ಹೇಮಂತ್ ಸೊರೆನ್ ಅವರ ಮನೆಯಲ್ಲಿದ್ದ ಕಾರು ಜಾರ್ಖಂಡ್ನ ಕಾಂಗ್ರೆಸ್ನ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಸಾಹು ಮಾಲೀಕತ್ವದ ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಸಾಹುಗೆ ಸಂಬಂಧಿಸಿದ ಆವರಣದ ಮೇಲೆ ಡಿಸೆಂಬರ್ನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು 351 ಕೋಟಿ ನಗದು ಪತ್ತೆಯಾಗಿದೆ. ತೆರಿಗೆ ಅಧಿಕಾರಿಗಳು ಹಣದ ರಾಶಿಯನ್ನು ಎಣಿಸುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗದ್ದು, ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು.
ಸೊರೆನ್ ಅವರ ನಿವಾಸದಲ್ಲಿ ಪತ್ತೆಯಾದ ಅವರ ಕಾರಿಗೆ ಸಂಬಂಧಿಸಿದಂತೆ ಇಡಿ ಈಗ ಶನಿವಾರ ಕಾಂಗ್ರೆಸ್ ಸಂಸದರನ್ನು ವಿಚಾರಣೆಗೆ ಕರೆದಿದೆ.
ಇನ್ನು ಕಳೆದ ವಾರ ಬಂಧನಕ್ಕೊಳಗಾದ ಸೊರೆನ್, ಜಾರ್ಖಂಡ್ನಲ್ಲಿ ಮಾಫಿಯಾದಿಂದ ಭೂ ಮಾಲೀಕತ್ವದ ಅಕ್ರಮ ಬದಲಾವಣೆಯ ಆರೋಪದ ದಂಧೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.