ನವದೆಹಲಿ, ಫೆ 8(DaijiworldNews/SK): ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ - ಇತರೆ ಹಿಂದುಳಿದ ವರ್ಗದ ಸಮುದಾಯದಲ್ಲಿ ಹುಟ್ಟಿಲ್ಲ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ಇದೀಗ ಕೇಂದ್ರ ಸರ್ಕಾರ ಪ್ರಧಾನಿ ಜಾತಿಯ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದ ಸಂಗತಿಗಳು ಎಂಬ ಶೀರ್ಷಿಕೆಯ ಸಂಕ್ಷಿಪ್ತ ಟಿಪ್ಪಣಿಯಲ್ಲಿ ಬಿಡುಗಡೆ ಮಾಡಿ ತಿರುಗೇಟು ನೀಡಿದೆ.
ಇದೀಗ ಬಿಡುಗಡೆ ಮಾಡಲಾದ ಶೀರ್ಷಿಕೆಯ ಸಂಕ್ಷಿಪ್ತ ಟಿಪ್ಪಣಿಯಲ್ಲಿ, ಮೋದ್ ಘಾಂಚಿ ಜಾತಿ (ಮೋದಿ ಸೇರಿರುವ ಉಪ-ಗುಂಪು) “ಗುಜರಾತ್ ಸರ್ಕಾರದ ಪಟ್ಟಿಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಮತ್ತು OBCಯಲ್ಲಿದೆ.
ಗುಜರಾತ್ನಲ್ಲಿ ನಡೆಸಿದ ಸಮೀಕ್ಷೆಯ ನಂತರ, ಮಂಡಲ್ ಆಯೋಗವು ಸೂಚ್ಯಂಕ 91(A) ಅಡಿಯಲ್ಲಿ ಒಬಿಸಿಗಳ ಪಟ್ಟಿಯನ್ನು ತಯಾರಿಸಿತು. ಇದರಲ್ಲಿ ಮೋದ್ ಘಾಂಚಿ ಜಾತಿಯೂ ಸೇರಿದೆ. ಭಾರತ ಸರ್ಕಾರದ ಗುಜರಾತ್ನ 105 OBC ಜಾತಿಗಳ ಪಟ್ಟಿಯು ಮೋದ್ ಘಾಂಚಿಯನ್ನು ಸಹ ಒಳಗೊಂಡಿದೆ ಎಂದು ಪಟ್ಟಿ ವರದಿ ಮಾಡಿದೆ.
ಜುಲೈ 25, 1994 ರಂದು ಮೋದಿಯವರ ತವರು ರಾಜ್ಯವಾದ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿಗಳ ಪಟ್ಟಿಯಲ್ಲಿ ಉಪ-ಗುಂಪನ್ನು ಸೇರಿಸುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ಅವರಿಗೆ ನೆನಪಿಸಿದೆ. ಇದರೊಂದಿಗೆ ಏಪ್ರಿಲ್ 4, 2000 ರ ಭಾರತ ಸರ್ಕಾರದ ಅಧಿಸೂಚನೆಯ ಪ್ರಕಾರ ಅದೇ ಉಪ-ಗುಂಪನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ಎರಡೂ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದಾಗ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರಲಿಲ್ಲ ಮತ್ತು ಆ ಸಮಯದಲ್ಲಿ ಕಾರ್ಯನಿರ್ವಾಹಕ ಕಚೇರಿಯನ್ನು ಹೊಂದಿರಲಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.