ನವದೆಹಲಿ,ಫೆ 09 (DaijiworldNews/ AK): ಇಂದು ನೂತನ ಸಂಸತ್ನ ಕ್ಯಾಂಟೀನ್ನಲ್ಲಿ ಸಂಸದರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಊಟ ಸವಿದರು.
ವಿವಿಧ ಪಕ್ಷಗಳ ಸಂಸದರನ್ನು ಪ್ರಧಾನಿ ಊಟಕ್ಕೆ ಆಹ್ವಾನಿಸಿದ್ದರು. ಬಿಜೆಪಿ ಸಂಸದರಾದ ಹೀನಾ ಗವಿತ್, ಎಸ್.ಫಂಗ್ನಾನ್ ಕೊನ್ಯಾಕ್, ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಎಲ್ ಮುರುಗನ್, ಟಿಡಿಪಿ ಸಂಸದ ರಾಮಮೋಹನ್ ನಾಯ್ಡು, ಬಿಎಸ್ಪಿ ಸಂಸದ ರಿತೇಶ್ ಪಾಂಡೆ ಮತ್ತು ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಅವರು ಸಂಸತ್ತಿನ ಕ್ಯಾಂಟೀನ್ನಲ್ಲಿ ಪ್ರಧಾನಿ ಜತೆ ಮಧ್ಯಾಹ್ನದ ಊಟ ಮಾಡಿದರು.
ಪ್ರಧಾನಿ ಮೋದಿ ಮತ್ತು ಸಂಸದರು ಸಸ್ಯಾಹಾರಿ ಊಟ ಮತ್ತು ರಾಗಿ ಲಾಡು ಸವಿದರು ಎನ್ನಲಾಗಿದೆ.ನೂತನ ಸಂಸತ್ನಲ್ಲಿ ಅಧಿವೇಶನ ನಡೆಯುತ್ತಿದ್ದು, ಫೆ.10 ರಂದು ಅಧಿವೇಶನ ಮುಗಿಯಲಿದೆ. ಇದೇ ಹೊತ್ತಿನಲ್ಲಿ ವಿವಿಧ ಪಕ್ಷಗಳ ಸಂಸದರ ಜೊತೆ ಪ್ರಧಾನಿ ಮೋದಿ ಸಂಸತ್ನ ಕ್ಯಾಂಟೀನ್ನಲ್ಲಿ ಊಟ ಸೇವಿಸಿದ್ದಾರೆ.