ಹುಬ್ಬಳ್ಳಿ, ಫೆ 09 (DaijiworldNews/AA): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜಿ.ಟಿ ದೇವೆಗೌಡ ಅವರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದಲ್ಲಿ ನಾವು ಬೆಂಬಲ ನೀಡುತ್ತೇವೆ. ಆದರೆ ಅವರು ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಗಳಿವೆ ಎಂದು ಅವರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.
ಸುಮಲತಾ ಅವರು ಕಾಂಗ್ರೆಸ್ ಪಕ್ಷ ಸೇರಿದಲ್ಲಿ ನಮ್ಮ ಬೆಂಬಲ ವಿರುವುದಿಲ್ಲ. ಸುಮಲತಾ ಅವರ ಪರವಾಗಿ ಟಿಕೆಟ್ ಕೇಳಿದ ನಾರಾಯಣಗೌಡ ಅವರು ಈಗ ಸಿಎಂ ಸಿದ್ಧರಾಮಯ್ಯ ಅವರ ಮನೇಲಿ ಇದ್ದಾರೆ. ಆದ್ದರಿಂದ ಸುಮಲತಾ ಕಾಂಗ್ರೆಸ್ ಗೆ ಸೇರಬಹುದು ಎಂದು ಅವರು ತಿಳಿಸಿದ್ದಾರೆ.