ವಯನಾಡು, ಫೆ 10 (DaijiworldNews/MS): ಕರ್ನಾಟಕದಲ್ಲಿ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟಿದ್ದ, ಕಾಡಾನೆ ವಯನಾಡಿನಲ್ಲಿ ದಾಳಿ ನಡೆಸಿದ್ದು ಮನೆಯಂಗಳದಲ್ಲಿದ್ದ ವ್ಯಕ್ತಿಯನ್ನು ಕೊಂದು ಹಾಕಿದೆ.
ವಯನಾಡಿನ ಮನಂತವಾಡಿ ಪಡಮಲದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಟಾಕ್ಸಿ ಡ್ರೈವರ್ ಆಗಿ ದುಡಿಯುತ್ತಿದ್ದ ಅಜಿ(೫೨) ಎಂದು ಗುರುತಿಸಲಾಗಿದೆ. ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಯೂ ಮನೆ ಕಾಪೌಂಡ್ ದ್ವಂಸಗೊಳಿಸಿ ಒಳಬಂದು ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಮನೆಯಂಗಳದಲ್ಲಿ ನಿಂತಿದ್ದ ಸೇರಿದಂತೆ ಇತರ ಕುಟುಂಬಸ್ಥರು ಪಾರಾಗಿದ್ದಾರೆ.
ಜಿಲ್ಲಾಧಿಕಾರಿ, ಸಿಸಿಎಫ್, ಡಿಎಫ್ಒ ಬರುವವರೆಗೂ ಅಜಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂಬುದು ಸ್ಥಳೀಯರ ಪಟ್ಟು ಹಿಡಿದಿದ್ದಾರೆ.