ಶಿವಮೊಗ್ಗ, ಫೆ 10\(DaijiworldNews/SK): ಮಲ್ಲಿಕಾರ್ಜುನ ಖರ್ಗೆ ಹೊಟ್ಟೆಯೊಳಗೆ ಪ್ರಿಯಾಂಕ್ ಖರ್ಗೆ ಅಂತಹ ಕೆಟ್ಟ ಹುಳ ಹುಟ್ಟಿದೆ. ಅವರಿಗೆ ತಳ ಬುಡ ಗೊತ್ತಿಲ್ಲ ಬಾಯಿಗೆ ಬಂದದ್ದು ಮಾತನಾಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯನ್ನು ಕಾಂಗ್ರೆಸ್ ನವರು ಅಂತಾ ಕರೆಯಲು ಇಷ್ಟಪಡಲ್ಲ. ಇವರೆಲ್ಲ ಕಾಂಗ್ರೆಸ್ಸಿನವರಲ್ಲ. ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ಹಂಚಿಕೊಂಡಿರುವವರು ಎಂದಿದ್ದಾರೆ.
ಇನ್ನು ಇವರೆಲ್ಲಾ ನನ್ನನ್ನು ತಪ್ಪು ಅನ್ನುತ್ತಾರಲ್ಲಾ. ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೆಸ್ ನಾಯಕರು ನನ್ನ ಹೇಳಿಕೆ ತಪ್ಪು ಅಂತಾ ಹೇಳಲಿ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.