ನವದೆಹಲಿ, ಫೆ 11 (DaijiworldNews/HR): 17ನೇ ಲೋಕಸಭೆ ಅವಧಿಯಲ್ಲಿ ಐದು ವರ್ಷಗಳ ಕಾಲ ಒಟ್ಟು 221 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
17ನೇ ಲೋಕಸಭೆ ಕೊನೆಯ ಅಧಿವೇಶನದ ಕೊನೆಯ ದಿನವಾದ ಶನಿವಾರ ಸಂಸತ್ ಕಲಾಪದ ಬಳಿಕ ಮಾತನಾಡಿದ ಅವರು, 5 ವರ್ಷಗಳಲ್ಲಿ 545 ಸಭೆಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದು, 5 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಕೃತಜ್ಞನಾಗಿರುತ್ತೇನೆ ಎಂದರು.
ಇನ್ನು ಕಳೆದ 5 ವರ್ಷಗಳಲ್ಲಿ ಉಭಯ ಸದನಗಳ ವ್ಯವಹಾರಕ್ಕೆ ಕೊಡುಗೆ ನೀಡಿ, 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪ್ರತಿಯೊಬ್ಬ ಸದಸ್ಯರು ಮತ್ತು ರಾಜಕೀಯ ಪಕ್ಷಗಳಿಗೆ ಜೋಶಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.