ರಾಯಚೂರು, ಫೆ 11 (DaijiworldNews/HR): ಲಿಂಗಸಗೂರು ತಾಲೂಕಿನ ನೀರಲಕೇರಿ ಗ್ರಾಮದ ನೀರಲಕೇರಿ ಸರಕಾರಿ ಶಾಲೆಯ 150 ಕ್ಕೂ ಅಧಿಕ ಮಕ್ಕಳ ಮಂಗನ ಬಾವು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
ಈ ಕಾಯಿಲೆಯೂ ಒಬ್ಬರಿಂದ ಒಬ್ಬರಿಗೆ ಹರಡಿ, ಇಡೀ ಶಾಲೆಯನ್ನು ಆವರಿಸಿದ್ದು, ಗಂಟಲು ಭಾಗದಲ್ಲಿ ಬಾವು, ತಲೆನೋವು, ಸ್ನಾಯು ಸೆಳೆತದಿಂದ ಮಕ್ಕಳು ಬಳಲುತ್ತಿದ್ದಾರೆ.
ಇನ್ನು ಬಾವು ಇರುವ ಕಡೆ ಅರಿಶಿಣ ಮತ್ತು ಪಟ್ಟಿ ಹಾಕಿ ಪೋಷಕರು ಮನೆ ಮದ್ದು ನೀಡುತ್ತಿದ್ದಾರೆ. ಮಂಗನ ಬಾವು ಕಾಯಿಲೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದಾರೆ. ಸದ್ಯ ಭಾದಿತರಿಗೆ ಆನೆಹೊಸರು, ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.