ಮೈಸೂರು, ಫೆ 11 (DaijiworldNews/HR): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈಸೂರಿಗೆ ಆಗಮಿಸಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕ್ಲಸ್ಟರ್ ನಾಯಕರ ಲೈನ್ಅಪ್ ಮಾಡಲಾಗಿತ್ತು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ ನಡುವೆ ವಾಗ್ವಾದ ನಡೆದಿದೆ.
ಅಮಿತ್ ಶಾ ಅವರ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ಉಸ್ತುವಾರಿಯನ್ನು ಮಾಜಿ ಶಾಸಕ ಪ್ರೀತಮ್ ಗೌಡ ಹೊತ್ತುಕೊಂಡಿದ್ದು, ಇತ್ತ ಪ್ರತಾಪ್ ಸಿಂಹ ಮತ್ತಿತರರನ್ನು ಕಡೆಗಣಿಸಲಾಗಿದೆ.
ಇನ್ನು ತಮ್ಮನ್ನು ಸೇರಿದಂತೆ ಮೈಸೂರು ಕ್ಲಸ್ಟರ್ನ ಪ್ರಮುಖ ನಾಯಕರನ್ನು ಪಟ್ಟಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪ್ರತಾಪ್ ಸಿಂಹ ಅವರು ಪ್ರೀತಮ್ ಗೌಡ ಅವರನ್ನು ನೇರವಾಗಿ ಪ್ರಶ್ನಿಸಿದ್ದು, ಪ್ರತಾಪಸಿಂಹ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಅನ್ನೋ ರೀತಿಯಲ್ಲಿ ಪ್ರೀತಮ್ ಗೌಡ ಉತ್ತರಿದ್ದಾರೆ. ಈ ವೇಳೆ ಪ್ರತಾಪ್ ಸಿಂಹ ಹಾಗೂ ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ.