ನವದೆಹಲಿ, ಫೆ 12 (DaijiworldNews/HR): ರಾಜ್ಯದಲ್ಲಿ ಉಪಮುಖ್ಯಮಂತ್ರಿಗಳ ನೇಮಕ ಸಂವಿಧಾನ ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಪಕ್ಷ ಅಥವಾ ಅಧಿಕಾರದಲ್ಲಿರುವ ಪಕ್ಷಗಳ ಒಕ್ಕೂಟದಲ್ಲಿ ಹಿರಿಯ ನಾಯಕರಿಗೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ನೀಡಲು ಹಲವು ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ನೇಮಕ ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಇನ್ನು “ನೀವು ಯಾರನ್ನಾದರೂ ಉಪಮುಖ್ಯಮಂತ್ರಿ ಎಂದು ಕರೆದರೂ ಅವರು ಸಚಿವರೇ ಆಗಿದ್ದಾರೆ. ಉಪಮುಖ್ಯಮಂತ್ರಿ ರಾಜ್ಯ ಸರ್ಕಾರದಲ್ಲಿ ಮೊದಲ ಮತ್ತು ಪ್ರಮುಖ ಸಚಿವರಾಗಿದ್ದಾರೆ. ಇದು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದ್ದಾರೆ.