ಬೆಂಗಳೂರು, ಫೆ 13 (DaijiworldNews/SK): ರಾಜ್ಯದಲ್ಲಿ ಈ ವರೆಗೆ ಅನೇಕ ಪಕ್ಷಗಳು ಆಡಳಿತವನ್ನು ನಡೆಸಿದೆ. ಆದರೆ ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣವರ ಫೋಟೋ ಹಾಕುವಂತೆ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆ ಪ್ರೇರಣೆಯಾಗಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ ಅವರು, ವಿಶ್ವಗುರು ಬಸವಣ್ಣ ಹಾಗೂ ಸಾಂಸ್ಕೃತಿಕ ನಾಯಕ ಎಂದು ನಮೂದಿಸಿರುವ ಬಸವೇಶ್ವರರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನಿಡಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿದ್ದರಾಮಯ್ಯ ಅವರನ್ನ ಎಷ್ಟು ಹೊಗಳಿದರು ಕಡಿಮೆ ಎಂದಿದ್ದಾರೆ.
ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಜಿಯವರನ್ನು ಯಾರು ಮರೆಯಲು ಸಾಧ್ಯವಿಲ್ಲ. ಇವರೆಲ್ಲರು ಸಮಾಜದಲ್ಲಿರುವ ಅಂಕು- ಡೊಂಕುಗಳನ್ನು ತಿದ್ದಿ ತೀಡಿದವರು. ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು. ಬ್ರಿಟಿಷ್ನವರು ಹೇಳುತ್ತಾರೆ, ಸಂಸದೀಯ ವ್ಯವಸ್ಥೆ ನಮ್ಮಿಂದ ಬಂತು ಅಂತ, ಆದರೆ ಸಂಸದೀಯ ವ್ಯವಸ್ಥೆ ಬಸವಣ್ಣವರ ಕಾಲದಲ್ಲೆ ಬಂದಿದೆ.
ಇನ್ನು ಅಂದಿನ ಕಾಲಘಟ್ಟದಲ್ಲಿ ಮಹಿಳೆಯರಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಮನವಾದಿಗಳು ಕೆಲವು ಕೆಟ್ಟ ಸಂಪ್ರದಾಯಗಳನ್ನ ಸಮಾಜದಲ್ಲಿ ಹುಟ್ಟುಹಾಕಿದ್ದರು. ಇದರಿಂದ ಸಮಾಜದಲ್ಲಿ ಅಸಮಾನತೆ ಚಿಗುರೊಡೆಯಿತು. ಆದರೆ ಬಸವಣ್ಣನವರು ಈ ಕಂದಚಾರವನ್ನು ಹೊಗಲಾಡಿಸಲು ಶ್ರಮಿಸಿದರು ಎಂದು ತಿಳಿಸಿದ್ದಾರೆ.