ಬೆಂಗಳೂರು, ಫೆ 13 (DaijiworldNews/AK):ಗುತ್ತಿಗೆದಾರ 40% ಕಮಿಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಾರದಲ್ಲಿ ವಿಚಾರಣಾ ಆಯೋಗ ತನಿಖೆ ಮುಗಿಯದಿದ್ದಲ್ಲಿ 100% ಬಿಲ್ ಮಂಜೂರಿಗೆ ಆದೇಶ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
40% ಕಮಿಷನ್ ಆರೋಪದ ಬಗ್ಗೆ ಇಂದು ಹೈಕೋರ್ಟ್ನ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಫೆ. 6ರೊಳಗೆ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು. 45 ದಿನ ಆದರೂ ತನಿಖೆ ಯಾಕೆ ನಡೆಸಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಗುತ್ತಿಗೆಯ 75% ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ, ಆದರೂ ಹಣ ಬಿಡುಗಡೆ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಂತ ಹಣ ತಡೆ ಹಿಡಿದಿಲ್ಲ, ಕೆಲವು ವಿಚಾರ ಕೇಳಿ ನಮಗೆ ಆಘಾತವಾಗಿದೆ. ಆ ವಿಚಾರಗಳನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಜ.3 ರಂದು ಆಯೋಗಕ್ಕೆ 45 ಕಾಮಗಾರಿಗಳ ದಾಖಲೆ ನೀಡಲಾಗಿದೆ ಎಂದು ಹೈಕೋರ್ಟ್ ಗೆ ತಿಳಿಸಿದರು.