ನವದೆಹಲಿ, ಏ 26 (Daijiworld News/SM): ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೌತಮ್ ಗಂಭೀರ್ ವಿರುದ್ಧ ಕೇಸು ದಾಖಲಾಗಿದೆ. ಗಂಭೀರ್ ವಿರುದ್ಧ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷ ಕ್ರಿಮಿನಲ್ ಕೇಸ್ ದಾಖಲು ಮಾಡಿದೆ.
ಗಂಭೀರ್ ದೆಹಲಿಯ ಕರೋಲ್ ಬಾಗ್ ಮತ್ತು ರಾಜಿಂದರ್ ನಗರ್ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂಬುವುದು ಅವರ ಮೇಲಿರುವ ಆರೋಪ. ಇದುವೆ ಪ್ರತಿಪಕ್ಷದವರಿಗೆ ದಾಳವಾಗಿದೆ. ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ. ಹಾಗಾಗಿ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಬೇಕೆಂದು ಆಪ್ ಅಭ್ಯರ್ಥಿ ಅತಿಶಿ ಮರ್ಲೇನಾ ಒತ್ತಾಯಿಸಿದ್ದಾರೆ.
ಐಪಿಸಿ ಸೆಕ್ಷನ್ 17, 31 ಹಾಗೂ 125 A ಪ್ರಕಾರ ಗೌತಮ್ ಗಂಭೀರ್ ವಿರುದ್ಧ ದೂರು ದಾಖಲಾಗಿದೆ. ಇನ್ನು ಇಷ್ಟಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ್ ವಿರುದ್ಧ ಹಜಾರೆ ಕೋರ್ಟ್ನಲ್ಲಿ ಕೇಸ್ ದಾಖಲಾಗಿದೆ. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಕಾರಣ ಅವರಿಗೆ ಜೈಲು ಶಿಕ್ಷೆ ನೀಡಬೇಕೆಂದು ದೂರುದಾರರು ಆಗ್ರಹಿಸಿದ್ದಾರೆ.