ಮಧ್ಯಪ್ರದೇಶ, ಎ27(Daijiworld News/SS): ಕಾನೂನು ಎಲ್ಲರಿಗೂ ಒಂದೇ, ನಾನೇನಾದರೂ ತಪ್ಪು ಮಾಡಿದ್ದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯ ಮೇಲೂ ದಾಳಿ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಸಮಾನವಾದುದು, ಮೋದಿ ತಪ್ಪು ಮಾಡಿದರೆ ನನ್ನ ಮೇಲೂ ಐಟಿ ದಾಳಿ ನಡೆಸಲಿ ಎಂದು ಹೇಳಿದರು.
ಆದಾಯ ತೆರಿಗೆ ದಾಳಿ ನಂತರ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ, ನಾವು ಜನಪ್ರತಿನಿಧಿಗಳು, ಹೀಗಾಗಿ ಯಾಕೆ ನಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸಬೇಕು ಅಂತ..? ದೇಶದ ಕಾನೂನು ಎಲ್ಲರಿಗೂ ಒಂದೇ. ಒಂದು ವೇಳೆ ಮೋದಿ ಏನಾದರೂ ತಪ್ಪು ಮಾಡಿದರೂ ಕೂಡಾ ಮೋದಿ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲೇಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ತುಘಲಕ್ ರಸ್ತೆಯು ಹಗರಣದ ಹಣವನ್ನು ಒಂದು ಕುಟುಂಬದ ಪ್ರಚಾರಕ್ಕಾಗಿ ಬಳಸುತ್ತಿದೆ. ದೆಹಲಿಯಿಂದ ಭೋಪಾಲ್ವರೆಗೆ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದೆ. ನಿಮ್ಮ ಚೌಕಿದಾರ್ ಭ್ರಷ್ಟಾಚಾರ ನಡೆಯದಂತೆ ಕಾಯುತ್ತಿರುವುದಾಗಿ ತಿಳಿಸಿದರು.