ನವದೆಹಲಿ, ಫೆ 15 (DaijiworldNews/ AK): ದೆಹಲಿ ಚಲೋʼ ರೈತರ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಮತ್ತೆ ಅಶ್ರುವಾಯು ಪ್ರಯೋಗಿಸಿದ್ದಾರೆ.
ಈ ವೇಳೆ ಅಶ್ರುವಾಯು ನಿಂದ ತಪ್ಪಿಸಿಕೊಳ್ಳಲು ರೈತರು ಚೆಲ್ಲಾಪಿಲ್ಲಿಯಾಗಿ ಚದುರಿದರೆ. ಇದೇ ವೇಳೆ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 63 ವರ್ಷದ ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿದೆ.
ಸ್ಥಳದಲ್ಲಿ 144 ಸೆಕ್ಷನ್ ವಿಧಿಸಿರುವುದರಿಂದ ಪೊಲೀಸ್ ಮತ್ತು ರೈತರು ಮುಖಾಮುಖಿಗೊಂಡಿದ್ದು ಗಡಿ ದಾಟಲು ಪ್ರಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಲಾಯಿತು. ತ್ರೀವವಾದ ರೈತರ ಪ್ರತಿಭಟನೆಯನ್ನು ನಿಭಾಯಿಸಲು ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.
ಇದರಿಂದ ರಾಷ್ಟ್ರ ರಾಜಧಾನಿಯ ಗಾಜಿಪುರ ಗಡಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಗುರುವಾರ ಪ್ರತಿಭಟನಾನಿರತ ರೈತ ಸಂಘಗಳ ಮುಖಂಡರು ಮತ್ತು ಕೇಂದ್ರ ಸಚಿವರ ನಡುವೆ ಮಾತುಕತೆ ನಡೆಯಿತು. ಆದ್ರೆ ಮಾತುಕತೆ ಯಾವುದೇ ಒಮ್ಮತಕ್ಕೆ ಬರಲಿಲ್ಲ ಎನ್ನಲಾಗಿದೆ.