ಭೋಪಾಲ್, ಫೆ 18 (DaijiworldNews/HR): ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಪಕ್ಷ ತೊರೆಯುವ ಸಾಧ್ಯತೆ ಹೆಚ್ಚಾಗಿದ್ದು, ಪುತ್ರ ನಕುಲ್ ಜತೆಗೆ ಕಮಲನಾಥ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಕಮಲನಾಥ್ ಅವರಿಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ್ದು, ಕಮಲನಾಥ್ ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ.
ಇನ್ನು ರಾಜ್ಯಸಭಾ ಟಿಕೆಟ್ ಗಾಗಿ ಕಮಲನಾಥ್ ಅವರು ಸಕ್ರಿಯವಾಗಿ ಲಾಬಿ ನಡೆಸುವುದರೊಂದಿಗೆ ವಿಷಯಗಳು ಕಗ್ಗಂಟಾಗಿದೆ ಎಂದು ವರದಿಯಾಗಿದೆ.