ಕೊಪ್ಪಳ, ಫೆ 18(DaijiworldNews/SK): ನಾನು ಮತ್ತೆ ಬಿಜೆಪಿಗೆ ಸೇರುವ, ಪಕ್ಷ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ಅದರಲ್ಲೂ ಕಾಂಗ್ರೆಸ್ ಸೇರುವುದಂತೂ ಕನಸಿನಲ್ಲೂ ಆಗದ ಮಾತು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ದೇಶದ ಜನರು ಪ್ರಧಾನಿ ಮೋದಿಯ ಅವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೆಆರ್ ಪಿಪಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಹೊರತು ಯಾವುದೇ ಕಾರಣಕ್ಕೆ ನಾನು ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಇದರ ಕುರಿತಾಗಿ ನನ್ನ ಜೊತೆ ಮಾತನಾಡಿರುವ ಹಿರಿಯ ನಾಯಕರಿಗೆ ನನ್ನ ಅಭಿಪ್ರಾಯಗಳನ್ನು ಈಗಾಗಲೇ ತಿಳಿಸಿದ್ದೇನೆ ಎಂದಿದ್ದಾರೆ.