ನವದೆಹಲಿ,ಏ 27(Daijiworld News/MSP): ಏರ್ ಇಂಡಿಯಾದ ಸಂಬಂಧಪಟ್ಟ ಮುಖ್ಯ ಸರ್ವರ್ ನಲ್ಲಿ ಶನಿವಾರ ಮುಂಜಾನೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಶನಿವಾರ ಮುಂಜಾನೆ 3.30 ಕ್ಕೆ ಸರ್ವರ್ ಡೌನ್ ಆಗಿದ್ದು ಪರಿಣಾಮ ಏರ್ ಇಂಡಿಯಾ ವಿಶ್ವದಾದ್ಯಂತ ಏರ್ಲೈನ್ಸ್ನ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ನಿಗದಿತ ಸಮಯಕ್ಕೆ ವಿಮಾನಗಳು ಹಾರಾಟ ನಡೆಸದೆ ಇದ್ದ ಕಾರಣ ಪ್ರಯಾಣಿಕರು ಏರ್ಪೋರ್ಟ್ನಲ್ಲೇ ಪರದಾಡುವಂತಾಗಿದೆ. ಇನ್ನು ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿತುಳುಕುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡು ಪ್ರಯಾಣಿಕರು ತೊಂದರೆಯ ಬಗ್ಗೆ ದೂರಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಅಧ್ಯಕ್ಷ ಅಶ್ವನಿ ಲೋಹಾನಿ, ಏರ್ಲೈನ್ಸ್ನ ಪ್ಯಾಸೆಂಜರ್ ಸಿಸ್ಟಮ್ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಇದನ್ನ ಬೇಗನೆ ಸರಿಪಡಿಸುತ್ತೇವೆ ಅಂತ ಹೇಳಿದ್ದಾರೆ.