ನವದೆಹಲಿ, ಫೆ 18 (DaijiworldNews/ AK): ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ. ದೇಶದಿಂದ ಭಯೋತ್ಪಾದನೆ, ನಕ್ಸಲಿಸಂನ್ನು ನಿರ್ಮೂಲನೆ ಮಾಡುತ್ತಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿ ಗದ್ದುಗೆ ಏರಲಿದ್ದಾರೆ. ಈ ಮೂಲಕ ಉಗ್ರವಾದ, ಭಯೋತ್ಪಾದನೆ, ನಕ್ಸಲಿಸಂಗೆ ಅಂತ್ಯ ಹಾಡಲಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಬಂದ ಎಲ್ಲಾ ಸರ್ಕಾರಗಳು ತಮ್ಮ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಗೆ ಶ್ರಮಿಸಿವೆ, ಆದರೆ ಮೋದಿ 10 ವರ್ಷಗಳಲ್ಲಿ ಒಟ್ಟಾರೆ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವುದೇ ಸೋನಿಯಾರ ಗುರಿ ಎಂದು ಟೀಕಿಸಿದರು. ಇಂಡಿಯಾ ಮೈತ್ರಿಕೂಟದಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳು ಹಗರಣದಲ್ಲಿ ಮುಳುಗಿವೆ. ಆಮ್ ಆದ್ಮಿ ಪಕ್ಷವೂ ದೆಹಲಿಯಲ್ಲಿ ಹಲವು ಹಗರಣಗಳನ್ನು ಮಾಡಿದೆ ಎಂದು ವಾಗ್ದಾಳಿ ನಡೆಸಿದರು.