ನವದೆಹಲಿ, ಏ 27(Daijiworld News/MSP): ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮ ಗಾಂಧಿ ಸರಣಿಯ ಹೊಸ ರೂ. 20 ಮುಖಬೆಲೆಯ ನೋಟನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿದೆ. ಹಳೆ ನೋಟು ರೂ. 20 ಕರೆನ್ಸಿಯ ನಿರ್ದಿಷ್ಟ ನಿಯತಾಂಕದ ಪ್ರಕಾರ ಇದು ವಿಭಿನ್ನವಾಗಿದೆ.
ಹೊಸ ರೂ 20 ನೋಟು ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿರಲಿದ್ದು ನೋಟಿನ ಹಿಂಬಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿರಲಿದೆ. ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುತ್ತದೆ" ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಹೊಸ ನೋಟು ಚಲಾವಣೆಗೆ ಬಂದ ಬಳಿಕವೂ ಈಗ ಅಸ್ತಿತ್ವದಲ್ಲಿರುವ ರೂ. 20 ರೂಪಾಯಿ ನೋಟುಗಳು ಲೀಗಲ್ ಟೆಂಡರ್ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.
ಹೊಸ ನೋಟಿನಲ್ಲಿ ಜ್ಯಾಮಿತಿಯ ವಿನ್ಯಾಸಗಳನ್ನು ಚಿತ್ರಿಸಲಾಗಿದ್ದು ನೋಟಿನ ಎರಡೂ ಭಾಗಗಳಲ್ಲಿ ಬೇರೆ ಬೇರೆ ಮಾದರಿಯ ಚಿತ್ತಾರವಿರಲಿದೆ .ಹೊಸ ನೋಟು 63 ಎಂಎಂ x 129 ಎಂಎಂ ಅಳತೆ ಹೊಂದಿರಲಿದೆ ಎಂದು ಹೇಳಿಕೆ ತಿಳಿಸಿದೆ.
ಇದು ಮಧ್ಯದಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ಹೊಂದಿ ಸೂಕ್ಷ್ಮ ಅಕ್ಷರಗಳಲ್ಲಿ 'ಆರ್ಬಿಐ', 'ಭಾರತ್', 'ಇಂಡಿಯಾ' ಮತ್ತು '20 ' ಎಂದು ಬರೆಯಲಾಗಿದೆ. ಆರ್ಬಿಐ ಲಾಂಛನದೊಂದಿಗೆ ಗವರ್ನರ್ ಸಹಿ, ಸಹ ನೋಟಿನಲ್ಲಿ ಇರಲಿದೆ. ಗಾಂಧಿ ಭಾವಚಿತ್ರದ ಬಲಭಾಗದಲ್ಲಿ ಅಶೋಕ ಸ್ಥಂಭ, ಮತ್ತು ಎಲೆಕ್ಟ್ರಾಟೈಪ್ ನಲ್ಲಿ 20 ಎಂದು ಮುದ್ರಿಸಲಾಗಿದೆ.