ಉತ್ತರಪ್ರದೇಶ, ಫೆ 19 (DaijiworldNews/MS): ಅಯೋಧ್ಯೆಯ ರಾಮಮಂದಿರದಲ್ಲಿ ಕಳೆದ ತಿಂಗಳು ನಡೆದ ಬಾಲ ರಾಮನ ಪ್ರಾಣ ಪ್ರ ತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರವು ದಲಿತರು, ಹಿಂದುಳಿದ ವರ್ಗದವರು ಮತ್ತು ರಾಷ್ಟ್ರಪತಿಯವರಿಗೆ ಆಹ್ವಾನ ನೀಡದೆ ಅವಮಾನಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕಿಡಿಕಾರಿದ್ದಾರೆ.
ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಉತ್ತರ ಪ್ರದೇಶದ ಪ್ರಯಾಗರಾಜ್ ತಲುಪುತ್ತಿದ್ದಂತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶವನ್ನು ನಡೆಸುವ ಜನರನ್ನು ದೇವಾಲಯದ ಕಾರ್ಯಕ್ರಮದಿಂದ ದೂರ ಇಡಲಾಗಿದೆ ಆದರೆ ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ಮತ್ತು ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಾಸಂಗಿಕವಾಗಿ ಅವರು ಹೇಳಿದಂತೆ ಐಶ್ವರ್ಯಾ ಅವರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.
"ನೀವು ರಾಮಮಂದಿರ ಪ್ರಾಣ ಪ್ರತಿಷ್ಠಾ'ವನ್ನು ಗಮನಿಸಿದ್ದೀರಾ? ನೀವು ಯಾವುದೇ OBC ಅಥವಾ ST/SC ಜನರಿದ್ದುದನ್ನು ನೋಡಿದ್ದೀರಾ? ಎಂದು ಪ್ರಶ್ನಿಸಿದ ಅವರು ದೇಶದಲ್ಲಿ ಶೇ 73ರಷ್ಟಿ ರುವ ದಲಿತರು, ಹಿಂದುಳಿದ ವರ್ಗದವರು, ಬುಡಕಟ್ಟು ಸಮುದಾಯದವರನ್ನು ಬಿಜೆಪಿ ಸರ್ಕಾರವು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ರಾಹುಲ್, ಬಂಡವಾಳಶಾಹಿಗಳಿಗೆ ಆದ್ಯ ತೆ ನೀಡಲಾಗುತ್ತಿದೆ ಎಂದಿದ್ದಾರೆ.