ಮುಂಬೈ, ಫೆ 19 (DaijiworldNews/ AK): ಬ್ಯಾಂಕ್ ಸಾಲ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಯು ಐಸಿಐಸಿಐ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಬಂಧಿಸಿರುವ ಕ್ರಮ ವಿವೇಚನಾರಹಿತ ಹಾಗೂ ಕಾನೂನಿಗೆ ಸೂಕ್ತ ಗೌರವ ತೋರದ ವರ್ತನೆ, ಅಧಿಕಾರದ ದುರ್ಬಳಕೆಯಾಗಿದೆ ಎಂದು ಬಾಂಬೆ ಹೈಕೋರ್ಟ್ ತ್ರೀವವಾಗಿ ತರಾಟೆಗೆ ತೆಗೆದುಕೊಂಡಿತು.
ಫೆಬ್ರವರಿ 6ರಂದು ಕೊಚ್ಚಾರ್ ದಂಪತಿಗಳ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿದ್ದ ನ್ಯಾ. ಅನುಜ ಪ್ರಭುದೇಸಾಯಿ ಹಾಗೂ ನ್ಯಾ. ಎನ್.ಆರ್.ಬೋರ್ಕರ್ ಅವರನ್ನೊಳಗೊಂಡ ವಿಭಾಗ ವಿಭಾಗೀಯ ನ್ಯಾಯಪೀಠವು, ಅವರಿಗೆ ಮತ್ತೊಂದು ನ್ಯಾಯಪೀಠವು ಮಂಜೂರು ಮಾಡಿದ್ದ ಮಧ್ಯಂತರ ಜಾಮೀನನ್ನು ಎತ್ತಿ ಹಿಡಿದಿತ್ತು.
ಕೊಚ್ಚಾರ್ ದಂಪತಿಗಳನ್ನು ಬಂಧಿಸಬೇಕಾಯಿತು ಎಂಬ ಬಗ್ಗೆ ಪ್ರಸ್ತುತ ಸನ್ನಿವೇಶಗಳು ಹಾಗೂ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಮಂಡಿಸುವಲ್ಲಿ ಕೇಂದ್ರ ತನಿಖಾ ಸಂಸ್ಥೆಯು ವಿಫಲವಾಗಿದ ಎಂದು ನ್ಯಾಯಪೀಠವು ಅಭಿಪ್ರಾಯ ಪಟ್ಟಿದ್ದು, ನ್ಯಾಯಾಲಯದ ಆದೇಶವು ಸೋಮವಾರ ಲಭ್ಯವಾಗಿದೆ. ಕಾನೂನು ಬಂಧನವನ್ನು ಕಾನೂನು ಬಾಹಿರವಾಗಿಸುತ್ತದೆ ಎಂದೂ ಕೂಡಾ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅವರ ಪತಿಯನ್ನು ಸಿಬಿಐ 2022 ರ ಡಿಸೆಂಬರ್ನಲ್ಲಿ ಬಂಧಿಸಿತ್ತು.