ಉತ್ತರ ಪ್ರದೇಶ, ಫೆ 21 (DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬ ಅಭ್ಯರ್ಥಿಯ ಕನಸಾಗಿರುತ್ತದೆ. ಆದರೆ ಈ ಪರೀಕ್ಷೆ ಹಾಜಾರಾಗುವುದು ಮಾತ್ರ ಶೈಕ್ಷಣೆಕ ಮಟ್ಟದಲ್ಲಿ ಹೆಚ್ಚು ಅಂಕಗಳಿಸಿದವರು. ಆದರೆ ಇಲೊಬ್ಬರು ಅಧ್ಯಯನದಲ್ಲಿ ಹಿಂದಿದ್ದರು ಐಎಎಸ್ ಅಧಿಕಾರಿಯಾಗ ಬೇಕೆಂಬ ತುಡಿತದಿಂದ ಪರೀಕ್ಷೆ ಬರೆದು 4 ನೇ ಪ್ರಯತ್ನದಲ್ಲಿ 3ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿದ ಜುನೈದ್ ಅಹ್ಮೆದ್ ಯಶೋಗಾಥೆ.
ಜುನೈದ್ ಅಹ್ಮೆದ್ ಮೂಲತಃ ಉತ್ತರ ಪ್ರದೇಶದ ಬಿಜ್ನೋರ್ನ ನಗಿನ ಎಂಬ ಸಣ್ಣ ಪಟ್ಟಣದವರು.ಇವರ ತಂದೆ ವಕೀಲರು ಮತ್ತು ತಾಯಿ ಗೃಹಿಣಿ. ಜುನೈದ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಆರಂಭಿಸಿ 12 ನೇ ತರಗತಿಯವರೆಗೆ ಅಲ್ಲಿಯೇ ಅಧ್ಯಯನ ಮಾಡಿದರು. ಇದರ ನಂತರ, ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (IGNOU) ಪದವಿ ಪಡೆದರು.
ಇನ್ನು ಜುನೈದ್ ಅಹ್ಮದ್ ಅವರು ಶಾಲಾ ದಿನಗಳಿಂದಲೂ ಒಬ್ಬ ಅವರೆಜ್ ಸ್ಟೂಡೆಂಟ್ ಆಗಿದ್ದವರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಡೆದಿದ್ದು ಶೇಕಡ.60 ಅಂಕ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದ್ದು ಶೇಕಡ.65 ಅಂಕ. ಹಾಗೆಯೇ ತಮ್ಮ ಕಾಲೇಜು ಶಿಕ್ಷಣದಲ್ಲಿ ಸಹ ಇವರು ಪಡೆದಿದ್ದು ಶೇಕಡ.65 ಅಂಕಗಳೇ. ಈ ರೀತಿಯ ಶೈಕ್ಷಣಿಕ ಸ್ಕೋರ್ ಹಿನ್ನೆಲೆ ಇದ್ದರು ಇದ್ದಕ್ಕಿದ್ದಂತೆ ಅವರಿಗೆ ಐಎಎಸ್ ಅಧಿಕಾರಿ ಆಗುವ ಆಲೋಚನೆ ಮೂಡಿತು.
ಇನ್ನು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕೆಂಬ ಅವರಲಿದ್ದ ತುಡಿತ ಪದವಿಯ ಕೊನೆಯ ವರ್ಷದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು. ಇದಕ್ಕಾಗಿ ಜಾಮಿಯಾದ ರೆಸಿಡೆನ್ಶಿಯಲ್ ತರಬೇತಿ ಕೇಂದ್ರಕ್ಕೆ ಸೇರಿದರು. ಇನ್ನು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ದಿನಗಳಲ್ಲಿ ಅಲ್ಲಿದ್ದ ಉಳಿದ ಆಕಾಂಕ್ಷಿಗಳನ್ನು ನೋಡಿ ಅವರೂ ತಮ್ಮ ಓದಿನ ಬಗ್ಗೆ ತುಂಬಾ ಸೀರಿಯಸ್ ಆದರು.
ಆದರೆ ಅವರಿಗೆ ಐಎಎಸ್ ಅಧಿಕಾರಿಯಾಗುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಮೊದಲ ಬಾರಿಗೆ ಜುನೈದ್ ಅವರು 2014 ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾದರು. ಮತ್ತೆ 2015 ರಲ್ಲಿ ಎರಡನೇ ಪ್ರಯತ್ನದಲ್ಲೂ ವಿಫಲರಾದರೂ. 2016 ರಲ್ಲಿ ಮೂರನೇ ಪ್ರಯತ್ನದಲ್ಲೂ ಅನುತ್ತೀರ್ಣರಾದರು. ಇನ್ನು 2017 ರಲ್ಲಿ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 353ನೇ ರ್ಯಾಂಕ್ ಪಡೆಯುವ ಮೂಲಕ ಇಂಡಿಯನ್ ರೆವಿನ್ಯೂ ಸರ್ವೀಸ್ಗೆ ಸೇರಿದರು. ಆದರೆ ಐಎಎಸ್ ಅಧಿಕಾರಿಯಾಗ ಬೇಕೆಂದಿದ್ದ ಕಾರಣ ಐಆರ್ಎಸ್ ತರಬೇತಿ ಜತೆಗೆಯೇ ಮತ್ತೊಮ್ಮೆ 2018ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯನ್ನು ಬರೆದು 3ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗುವ ಮೂಲಕ ಸಾಧಾರಣ ವಿದ್ಯಾರ್ಥಿಯೂ ಐಎಎಸ್ ಅಧಿಕಾರಿಯಾಗಬಹುದು ಎಂಬುದಕ್ಕೆ ತೋರಿಸಿಕೊಟ್ಟಿದ್ದಾರೆ.