ಶಿವಮೊಗ್ಗ,ಫೆ 21 (DaijiworldNews/ AK): ನಾಳೆಯಿಂದ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಪೌಷ್ಠಿಕಾಂಶಭರಿತ ರಾಗಿಮಾಲ್ಟ್ ಅನ್ನು ಹಾಲಿನೊಂದಿಗೆ ಬೆರೆಸಿ ನೀಡುವ ಯೋಜನೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಮಾಧ್ಯಮ ಗೋಷ್ಟಿ ನಡೆಸಿದ ಅವರು, ನಾಳೆಯಿಂದ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಪೌಷ್ಠಿಕಾಂಶಭರಿತ ರಾಗಿಮಾಲ್ಟ್ ಅನ್ನು ಹಾಲಿನೊಂದಿಗೆ ಬೆರೆಸಿ ನೀಡುವ ಯೋಜನೆ ಆರಂಭವಾಗಲಿದೆ ಎಂದರು.
ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಲ್ಲಿ ಲಾಂಚ್ ಮಾಡಲಿದ್ದಾರೆ . ಸುಮಾರು 59 ಲಕ್ಷ ಶಾಲಾ ಮಕ್ಕಳಿಗೆ ಈಗಾಗಲೇ ವಾರದಲ್ಲಿ 5 ದಿನ ನೀಡುತ್ತಿರುವ ಹಾಲು ಮತ್ತು ವಾರದಲ್ಲಿ ಎರಡು ದಿನ ಮೊಟ್ಟೆ ಸೇರಿದಂತೆ ಇನ್ನು ಮುಂದೆ ವಾರಲ್ಲಿ 3 ದಿನ ರಾಗಿಮಾಲ್ಟ್ ಕೂಡ ನೀಡಲಾಗುವುದು ಎಂದು ಹೇಳಿದರು.
ರಾಗಿಮಾಲ್ಟ್ ಸ್ವಾದಿಷ್ಟವಾಗಿರುವ ಜೊತೆಗೆ ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಸಲಿದೆ ಎಂದು ಅವರು ಹೇಳಿದರು.