ಮಿಜೋರಾಂ, ಎ27(Daijiworld News/SS): ತನ್ನ ಸೈಕಲ್ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡ ಕೋಳಿಮರಿಯನ್ನು ಆಸ್ಪತ್ರೆಗೆ ಕೊಂಡೊಯ್ದ ಪುಟ್ಟ ಬಾಲಕ ಪೇಟಾ ಸಂಘಟನೆಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.
ಕೋಳಿ ಮರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲು ಒಂದು ಕೈಯಲ್ಲಿ ಕೋಳಿ ಮರಿ ಹಾಗೂ ಇನ್ನೊಂದು ಕೈಯಲ್ಲಿ 10 ರೂಪಾಯಿ ನೋಟು ಹಿಡಿದುಕೊಂಡು ಬಾಲಕ ಆಸ್ಪತ್ರೆಗೆ ಹೋಗಿದ್ದು, ಈ ಪುಟ್ಟ ಬಾಲಕನ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ದಯೆ ಮತ್ತು ಮಾನವೀಯತೆಯ ಸಾಕ್ಷಿಯೆಂಬಂತೆ ಬಾಲಕನ ಈ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ಪಾತ್ರವಾಗಿತ್ತು.
ಇದೀಗ ಭಾರತೀಯ ಪೇಟಾ ಸಂಘಟನೆ ಬಾಲಕ ಡೆರೆಕ್ ಸಿ ಲಾಲ್ಚಾನಿಹಿಮಾಗೆ ಸಹಾನುಭೂತಿಯ ಮಗು ಪ್ರಶಸ್ತಿ ನೀಡಿ ಗೌರವಿಸಿದ್ದು ಬೇರೆ ಮಕ್ಕಳಿಗೆ ಅದು ಸ್ಫೂರ್ತಿಯಾಗಲಿದೆ ಎಂದು ಹೇಳಿದೆ.