ಬೆಂಗಳೂರು, ಫೆ 21 (DaijiworldNews/ AK):ಕೇಂದ್ರಿದಿಂದ ಅನುದಾನ ಹಾಗೂ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕವೂ ರಾಜ್ಯಕ್ಕೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಣಕಾಸಿನ ವಿಚಾರದಲ್ಲಿ ಕೇಂದ್ರ ಸರ್ಚಾರ್ಜ್, ಸೆಸ್ ತೆಗೆದುಕೊಳ್ಳುತ್ತದೆ. ಅದರಲ್ಲೂ ರಾಜ್ಯಕ್ಕೆ ಪಾಲು ಕೊಡಬೇಕು ಎಂದು ಹೇಳುತ್ತಾರೆ. ಸರ್ಚಾರ್ಜ್ ಮತ್ತು ಸೆಸ್ಸು 1958 ನಿಂದಲೇ ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಚಾರ್ಜ್ ಸೆಸ್ ಹಾಕಬಹುದು. ರಾಜ್ಯ ಸರ್ಕಾರ ಬೆಂಗಳೂರಿನ ಮೂಲ ಸೌಕರ್ಯ ಕಲ್ಪಿಸಲು ಸರ್ಚಾರ್ಜ್ ಸೆಸ್ ಹಾಕುತ್ತಿದ್ದಾರೆ. ಅದು ಬಂಡವಾಳವಾಗಿ ಪರಿವರ್ತನೆಯಾಗಿರುವುದರಿಂದ ರಾಜ್ಯದ ಅಭಿವೃದ್ಧಿಗೆ ಹಣ ಬಳಕೆಯಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಳೆದ ಆರೇಳು ವರ್ಷದಿಂದ ತಂಬಾಕು, ಸಿಗರೇಟ್, ದುಬಾರಿ ಕಾರು, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಸೆಸ್ ಹಾಕಿ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ನೀಡುತ್ತದೆ. ಕೇಂದ್ರ ಸರ್ಕಾರ ಹಾಕಿರುವ ಸೆಸ್ನಲ್ಲಿ ಕರ್ನಾಟಕಕ್ಕೆ ೪೫ ಸಾವಿರ ಕೋಟಿ ಬರಬೇಕು ಎಂದು ಮಾಡುತ್ತಿರುವ ವಾದ ಸರಿಯಲ್ಲ. ಐದು ವರ್ಷದಲ್ಲಿ 1,06,228 ಕೋಟಿ ರೂ. ರಾಜ್ಯಕ್ಕೆ ಜೆಎಸ್ಟಿ ಪರಿಹಾರದ ಮೂಲಕ ಬಂದಿದೆ.ಹೀಗಾಗಿ ರಾಜ್ಯಕ್ಕೆ ನಷ್ಟ ಆಗಿದೆ ಎನ್ನುವ ವಾದ ಸರಿಯಲ್ಲ ಎಂದು ವಾದ ಮಾಡಿದರು.
ಕೊವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಾಲ ಕೊಟ್ಟಿದೆ. ಅದರ ಸಾಲ ಮತ್ತು ಬಡ್ಡಿಯನ್ನು ಕೇಂದ್ರ ಸರ್ಕಾರ ತೀರಿಸುತ್ತದೆ. 15ನೇ ಹಣಕಾಸಿನಲ್ಲಿ ಜನಸಂಖ್ಯಾ ಮಾನದಂಡವನ್ನು 1971 ಬದಲು 2012ರ ಜನಸಂಖ್ಯಾ ಆಧಾರ ಇಟ್ಟುಕೊಂಡಿದ್ದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಯಾವುದೇ ಸರ್ಕಾರವಾದರೂ ಹತ್ತಿರದ ಜನಸಂಖ್ಯೆಯನ್ನು ಮಾನದಂಡ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
15ನೇ ಹಣಕಾಸು ಆಯೋಗ ಕೊವಿಡ್ ಕಾರಣದಿಂದ ಒಂದು ವರ್ಷ ತಡವಾಗಿ ಬಂದಿದೆ. ಫೆರಿಪೆರಲ್ ರಿಂಗ್ ರಸ್ತೆಗೆ ಈಗಲೂ ಕೇಂದ್ರದಿಂದ ಅನುದಾನ ಬರುತ್ತದೆ. ಆದರೆ, ರಿಂಗ್ ರೋಡ್ ಯೋಜನೆಗೆ ಭೂಸ್ವಾಧೀನ ಮಾಡಲಾಗಿಲ್ಲ. ಯೋಜನೆ ಆರಂಭ ಮಾಡಿಲ್ಲ. ಆರಂಭ ಮಾಡಿದರೆ ಖಂಡಿತವಾಗಿಯೂ ಕೇಂದ್ರದ ಅನುದಾನ ಬರುತ್ತದೆ. ಕೇಂದ್ರದ ಅನುದಾನ ಬರಬೇಕಾದರೆ ನ್ಯಾಯ ಸಮ್ಮತವಾದ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಬರುತ್ತದೆ ಎಂದರು.