ಉತ್ತರಪ್ರದೇಶ, ಏ 27(Daijiworld News/MSP): ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಉತ್ತರ ಪ್ರದೇಶದ ಸಚಿವ, ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಸುದ್ದಿಗೆ ಗ್ರಾಸರಾಗಿದ್ದಾರೆ. ಭಾರತದಲ್ಲಿದ್ದು ವಂದೇ ಮಾತರಂ ಗೀತೆ ಈ ದೇಶದಲ್ಲಿ ಬದುಕುವ ಯಾವುದೇ ಹಕ್ಕು ಇಲ್ಲ. ಇಂತವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಹೇಳಿಕೆ ನೀಡಿದ್ದಾರೆ.
ವಂದೇ ಮಾತರಂ ಗೀತೆ ಹಾಡುವುದು ಒಂದು ಭಾವನಾತ್ಮಕ ವಿಚಾರವಾಗಿದೆ. ನೀವು ಭಾರತದಲ್ಲಿ ವಾಸಿಸುತ್ತಿದ್ದೀರಿ ಎಂದ್ರೆ ವಂದೇ ಮಾತರಂ ಹಾಡಲೇಬೇಕು. ಈ ಹಾಡು ಸಂಸ್ಕೃತ ಭಾಷೆಯಲ್ಲಿದ್ದರೂ ಇದನ್ನು ಉರ್ದು ಭಾಷೆಗೂ ಭಾಷಾಂತರ ಮಾಡಬಹುದಾಗಿದೆ. ಯಾರು ಈ ಹಾಡನ್ನು ಹೃದಯಾಂತರಾಳದಿಂದ ಹಾಡಲು ಬಯಸುವುದಿಲ್ಲವೋ ಅಂಥವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ ಎಂದು ಸುರೇಂದ್ರ್ತಸಿಂಗ್ ಮಾದ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.
ಒಂದು ವೇಳೆ ನನಗೆ ಅಧಿಕಾರವಿದ್ದರೆ, ಇಂತಹ ಜನರ ಪಾಸ್ ಪೋರ್ಟ್ ಸಿದ್ದಪಡಿಸಿ ನಾನು ವಾರದೊಳಗಾಗಿ ಪಾಕಿಸ್ತಾನಕ್ಕೆ ಕಳುಹಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು
ಅಂದಹಾಗೇ ಉತ್ತರಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಇಂತಹ ಹೇಳಿಕೆ ನೀಡುತ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ, ಸೋನಿಯಾ ಗಾಂಧಿಯವರು ಭಾರತೀಯ ಡ್ಯಾನ್ಸರ್ ಸಪ್ನಾ ಚೌಧರಿಗೆ ಹೋಲಿಸಿದ್ದರು.
ಭಾರತದಲ್ಲಿ ಸಪ್ನಾ ಚೌಧರಿಯ ವೃತ್ತಿ ಯಾವುದೋ, ಅದೇ ವೃತ್ತಿಯನ್ನು ಇಟಲಿಯಲ್ಲಿ ಸೋನಿಯಾ ಗಾಂಧಿ ಮಾಡ್ತಾ ಇದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ರಾಹುಲ್ ಗಾಂಧಿಯ ತಾಯಿ ( ಸೋನಿಯಾ ಗಾಂಧಿ ) ಸಹ ಇಟಲಿಯಲ್ಲಿ ಡ್ಯಾನ್ಸರ್ ಆಗಿಯೇ ಇದ್ದರು. ಇನ್ನು, ನಿಮ್ಮ ತಂದೆ ( ರಾಜೀವ್ ಗಾಂಧಿ ) ಸೋನಿಯಾ ಗಾಂಧಿಯನ್ನು ತನ್ನವರಾಗಿಸಿಕೊಂಡಂತೆ, ತಾವೂ ಸಹ ಸಪ್ನಾರನ್ನು ತನ್ನವರಾಗಿಸಿಕೊಳ್ಳಿ ( ಮದುವೆ ಮಾಡಿಕೊಳ್ಳಿ) '' ಎಂದು ರಾಹುಲ್ ಗಾಂಧಿಯವರಿಗೆ ಹೇಳಿದ್ದರು. ಅಲ್ಲದೆ, ''ಅತ್ತೆ ಹಾಗೂ ಸೊಸೆ ಇಬ್ಬರೂ ಒಂದೇ ವೃತ್ತಿಯಲ್ಲಿದ್ದವರು ಹಾಗೂ ಒಂದೇ ರೀತಿಯ ಸಂಸ್ಕಾರ ಉಳ್ಳವರಾಗಿರುತ್ತಾರೆ'' ಎಂದಿದ್ದರು