ಬೆಂಗಳೂರು, ಫೆ 22 (DaijiworldNews/HR): ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೇಂದ್ರದಿಂದ ನಮಗೆ ಬರಬೇಕಾದ ತೆರಿಗೆ ಪಾಲು ಮತ್ತು ಅನುದಾನವು ಕನ್ನಡಿಗರ ಹಣ. ಏಳು ಕೋಟಿ ಕನ್ನಡಿಗರ ಹಿತದೃಷ್ಟಿಯಿಂದ ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದು ನನ್ನ ಕರ್ತವ್ಯ. ಅದಕ್ಕೆ ಅಡ್ಡಿಪಡಿಸಿದರೆ ಜಗ್ಗುವುದಿಲ್ಲ-ಬಗ್ಗುವುದಿಲ್ಲ, ವಿಚಲಿತ ಆಗುವುದಿಲ್ಲ ಎಂದರು.
ಇನ್ನು ನಾಯಕತ್ವ ಯಾರದ್ದೇ ಇರಲಿ. ನಾವು ಹೋದಾಗ ಹಣ ಕೊಟ್ಟಿಲ್ಲ. ಬೇಕಿದ್ದರೆ ನಿಮ್ಮ ನಾಯಕತ್ವದಲ್ಲೇ ದಿಲ್ಲಿಗೆ ಹೋಗೋಣ. ತೆರಿಗೆ ಪಾಲು ಮತ್ತು ಸಹಾಯಧನ 50,257 ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ., 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಲಾದ 11,495 ಕೋಟಿ ರೂ. ಕೊಡಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.