ಬೆಂಗಳೂರು, ಫೆ 22(DaijiworldNews/SK): ಮದ್ಯದ ಮೇಲಿನ ದರ ಏರಿಕೆಗೆ ಮದ್ಯಪ್ರಿಯರು ಸಿಟ್ಟಾಗಿದ್ದಾರೆ. ಕುಡುಕರು ಪ್ರತಿಭಟನೆ ಮಾಡಿದ್ದೇ ನಾನು ನೋಡಿರಲಿಲ್ಲ. ಆದರೆ ಕುಡುಕರು ಕೂಡ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯ ಸಂದರ್ಭ ಮಾತನಾಡಿದ ಆರ್. ಅಶೋಕ್ ಅವರು, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಮದ್ಯದ ಘೋಷಿತ ಸ್ಲಾಬ್ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್ ಸ್ಲಾಬ್ ಪರಿಷ್ಕರಣೆ ಮಾಡಲಾಗುವುದು ಹೇಳಲಾಗಿದೆ.
ಇದೀಗ ಈ ವಿಚಾರವಾಗಿ ಕುಡುಕರು ಕೂಡ ಪ್ರತಿಭಟನೆ ಮಾಡಲು ಮುಂದಾಗಿದ್ದು, ನಮ್ಮ ಎಣ್ಣೆ ನಮ್ಮ ಹಕ್ಕು ಅಂತಿದ್ದಾರೆ ಎಂದು ತಿಳಿಸಿದ್ದಾರೆ.