ಮಹಾರಾಷ್ಟ ಫೆ 23 (DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಆದರೆ ಇಲ್ಲೋಬ್ಬರು ತರಬೇತಿ ಕೇಂದ್ರಗಳಿಗೆ ಹಣ ವ್ಯಯಿಸದೇ ಸ್ವಯಂ-ಅಧ್ಯಯನವನ್ನು ನಡೆಸಿ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಮಂದರ್ ಪತ್ಕಿ ಅವರ ಯಶೋಗಾಥೆ.
ಮೂಲತ ಮಹಾರಾಷ್ಟದ ಮಂದರ್ ಪತ್ಕಿ ಅವರು ಶೈಕ್ಷಣಿಕವಾಗಿ ಯಾವುದೇ ರ್ಯಾಂಕ್ ವಿದ್ಯಾರ್ಥಿ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ ಪುಣೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮ ಅಧ್ಯಯನ ಮಾಡಿದರು. ನಂತರ ಪುಣೆಯ ವಿಶ್ವಕರ್ಮ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.
ಬಾಲ್ಯದಿಂದಲೂ ಯುಪಿಎಸ್ ಸಿ ಬರೆಯ ಬೇಕೆಂಬ ಕನಸು ಕಂಡಿದ್ದ ಮಂದರ್ ಪತ್ಕಿ ಅವರು ತಮ್ಮ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಮುಂದಾದರು.
ಇನ್ನು ಅಧ್ಯಯನವನ್ನು ಆರಂಬಿಸಿದ ಮಂದರ್ ಯಾವುದೇ ತರಬೇತಿ ಕೇಂದ್ರಗಳಿಗೆ ಹಣ ವ್ಯಯಿಸದೆ ಸ್ವಯಂ ಅಧ್ಯಯನವನ್ನು ಆಯ್ಕೆ ಮಾಡಿಕೊಂಡರು. ಎಲ್ಲಾ ತಯಾರಿಗಳ ನಂತರ 2019 ರಲ್ಲಿ ಪರೀಕ್ಷೆ ಬರೆಯಲು ಸಿದ್ದರಾದ ಮಂದರ್ ಅವರ ಶ್ರಮಕ್ಕೆ ಪ್ರತಿಫಲವಾಗಿ ಮೊದಲ ಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯನ್ನು ಟಾಪ್ 22 ನೇ ರ್ಯಾಂಕ್ ನಲ್ಲಿ ಪಾಸ್ ಮಾಡುವ ಮೂಲಕ ಯಶಸ್ಸುಕೊಂಡರು.
ಮಂದರ್ ಪತ್ಕಿ ಅವರು ಪ್ರಸ್ತುತ ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್ಮೆಂಟ್ ಸಚಿವಾಲಯದಲ್ಲಿ ಅಸಿಸ್ಟಂಟ್ ಕಲೆಕ್ಟರ್ ಮತ್ತು ಪ್ರಾಜೆಕ್ಟ್ ಆಫೀಸರ್ ಆಗಿ ನಿಯೋಜನೆಗೊಳ್ಳುವ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದಾರೆ.