ನವದೆಹಲಿ, ಫೆ 23(DaijiworldNews/SK): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಇದೀಗ ಉತ್ತರಪ್ರದೇಶದ ರಾಯ್ ಬರೇಲಿ ತಲುಪಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಟಿವಿ ವರದಿಗಾರರಲ್ಲಿ ನಿಮ್ಮ ಮಾಲಕ ದಲಿತನೇ ಎಂದು ಪ್ರಶ್ನಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಇಂಡಿಯಾ ನ್ಯೂಸ್ ನ ವರದಿಗಾರ ಹಾಗೂ ಮಾಲಕ ಜೊತೆ ಒರಟಾಗಿ ವರ್ತಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ನೀವು ಮಾಧ್ಯಮದವರೇ? ನಿಮ್ಮ ಹೆಸರೇನು? ನಿಮ್ಮ ಮಾಲಕನ ಹೆಸರೇನು? ಅವರು ಒಬಿಸಿಯೇ ಅಲ್ಲ , ದಲಿತರೇ ಎಂದು ಪ್ರಶ್ನಿಸಿದ್ದರು.
ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆ ಇದಕ್ಕೆ ಸಮಜಾಯಷಿ ನೀಡಿರುವ ಕಾಂಗ್ರೆಸ್, ಮೀಡಿಯಾದಲ್ಲಿ ಮೀಸಲು ಕ್ಷೇತ್ರದ ಮಂದಿ ಎಷ್ಟು ಜನರಿದ್ದಾರೆ ಎಂದಿ ತಿಳಿಯಲು ಈ ರೀತಿಯ ಪ್ರಶ್ನೆಯನ್ನು ರಾಹುಲ್ ಗಾಂಧಿ ಅವರು ಕೇಳಿದ್ದಾರೆ ಎಂದು ತಿಳಿಸಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ, ಚುನಾವಣ ಸಂದರ್ಭದಲ್ಲಿ ಉದ್ವಿಗ್ನತೆ ಹೆಚ್ಚಾಗದಂತೆ, ಯಾವುದೇ ವ್ಯಕ್ತಿಗೆ ಹಾನಿಯಾಗದಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಗ್ರಹಿಸಿದ್ದಾರೆ.