ಬೆಂಗಳೂರು, ಫೆ 23 (DaijiworldNews/ AK): ಶುಕ್ರವಾರ ಮುಕ್ತಾಯವಾಗಬೇಕಿದ್ದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಸೋಮವಾರದವರೆಗೆ ವಿಸ್ತರಿಸಲಾಗಿದೆ.
ಆದರೆ ಕೆಲವು ಪ್ರಮುಖ ಮಸೂದೆಗಳ ಮೇಲಿನ ಚರ್ಚೆ, ಅಂಗೀಕಾರ ಬಾಕಿಯಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನಾರೋಗ್ಯವಿರುವುದರಿಂದ ಕಲಾಪದಲ್ಲಿ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ನಾಳೆ ಮತ್ತು ನಾಡಿದ್ದು ವಿಶ್ರಾಂತಿ ತೆಗೆದುಕೊಂಡು ಸೋಮವಾರ ಸದನದಲ್ಲಿ ಕಲಾಪಕ್ಕೆ ಹಾಜರಾಗಲಿದ್ದಾರೆ.
ಮುಖ್ಯಮಂ ತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇ ಲಿನ ಚರ್ಚೆ ಗೆ ಶುಕ್ರವಾರ ಉತ್ತರಿಸಬೇಕಿತ್ತು. ನಂ ತರ ಬಜೆಟ್ ಗೆ ಸದನದ ಲೇಖಾನುದಾನ ಪಡೆಯಬೇಕಿತ್ತು. ಬಳಿಕ ಅಧಿವೇಶನ ಮುಕ್ತಾಯವಾಗುತ್ತಿತ್ತು. ಮುಖ್ಯಮಂತ್ರಿಯವರು ಶುಕ್ರವಾರ ಉತ್ತರ ನೀಡಿಲ್ಲ. ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಡೆದ ತೀರ್ಮಾನದ ಬಳಿಕ ಅಧಿವೇಶನ ಒಂದು ದಿನ ವಿಸ್ತರಿಸುವ ನಿರ್ಣಯವನ್ನು ಸ್ಪೀಕರ್ ಯು.ಟಿ . ಖಾದರ್ ಪ್ರಕಟಿಸಿದರು.