ಬೆಂಗಳೂರು, ಫೆ 23 (DaijiworldNews/HR): ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್ಗಳ ಬ್ರದರ್ರಿಂದ ಕುಕ್ಕರ್ ಹಂಚಿಕೆ! ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ. ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ, ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ ಮಾನ್ಯ ಡಿ .ಕೆ. ಸುರೇಶ್ ಅವರೇ ಎಂದು ಹೇಳಿದೆ.
ಅಂದ ಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು, ಆದರೆ ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್ ವಿಶಲ್ ಸಹ ಇದೆ ಎಂಬುದು ಇಂದು ಜಗಜ್ಜಾಹೀರಾಗಿದೆ. ಮತದಾರರಿಗೆ ಕುಕ್ಕರ್ ಆಮಿಷ ಒಡ್ಡುತ್ತಿರುವ ಸಂಸದ ಡಿಕೆ ಸುರೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದೆ.