ನವದೆಹಲಿ, ಫೆ 24(DaijiworldNews/MS): ಭಾರತೀಯ ದಂಡ ಸಂಹಿತೆಯನ್ನು ಬದಲಿಸಲು ಸಜ್ಜಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ಭಾರತೀಯ ನ್ಯಾಯ ( ದ್ವಿತೀಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ದ್ವಿತೀಯ) ಕಾಯ್ದೆಗಳು ಜುಲೈನಿಂದ ಅನುಷ್ಟಾನಕ್ಕೆ ಬರಲಿವೆ.
ಈ ಮೂರು ಕಾನೂನುಗಳಿಗೆ ಕಳೆದ ವರ್ಷ ಡಿಸೆಂಬರ್ 21 ರಂದು ಸಂಸತ್ತಿನಲ್ಲಿ ಅನುಮೋದನೆ ನೀಡಲಾಗಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕ್ರಿಮಿನಲ್ ನ್ಯಾಯ ಮಸೂದೆಗಳ ಅಂಗೀಕಾರವನ್ನು ಶ್ಲಾಘಿಸಿದರು, ಅದು ಭಾರತದ ಇತಿಹಾಸದಲ್ಲಿ ಒಂದು ಅದ್ಬುತ ಕ್ಷಣವಾಗಿ ವಸಾಹತುಶಾಹಿ ಯುಗದ ಕಾರ್ಯಗಳನ್ನು ಬದಲಾಯಿಸುತ್ತದೆ ಮತ್ತು ಇದು ಸಾರ್ವಜನಿಕ ಸೇವೆ ಮತ್ತು ಕೇಂದ್ರೀ ಕೃತ ಕಾನೂನುಗಳೊಂದಿಗೆ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ಹೇಳಿದ್ದರು.