ಬೆಂಗಳೂರು, ಫೆ 26(DajiworldNews/AK):ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆಗೆ ಕಡ್ಡಾಯ ಹಾಜರಾತಿಗಾಗಿ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.
ವಿಧಾನನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ ವಿಪ್ ಕೊಟ್ಟಿದ್ದೀವೆ. ಸಂಜೆ 6 ಗಂಟೆಗೆ ಕಡ್ಡಾಯ ಎಲ್ಲರೂ ಹಿಲ್ಟನ್ ಹೋಟೆಲ್ಗೆ ಬರುವಂತೆ ವಾಟ್ಸಪ್ನಲ್ಲಿ ಸಂದೇಶ ಕಳಿಸಿದ್ದೀವಿ, ವೈಯಕ್ತಿಕವಾಗಿಯೂ ಫೋನ್ ಮಾಡಿ ಹೇಳಿದ್ದೇವೆ. ಎಲ್ಲಾ ಶಾಸಕರು ರಾತ್ರಿ ಅಲ್ಲೇ ಉಳಿದುಕೊಳ್ಳಲು ಹೇಲಲಾಗಿದೆ ಎಂದರು.
ಬಳಿಕ ಮಂಗಳವಾರ ಬೆಳಗ್ಗೆ ಎಲ್ಲಾ ಶಾಸಕರು ಹೋಟೆಲ್ನಿಂದ ಬಸ್ನಲ್ಲಿ ಬರುತ್ತೇವೆ.ಬಸ್ ವ್ಯವಸ್ಥೆ ಆಗಿದೆ, ಎಲ್ಲರೂ ಒಟ್ಟಿಗೆ ಬಂದು ಮತ ಹಾಕಿ ಹೋಗ್ತೀವಿ. ವೋಟಿಂಗ್ ಪ್ಯಾಟ್ರನ್ ಟ್ರೈನಿಂಗ್ ಕೊಡೋಕೆ, ಯಾವ ರೀತಿ ಮಾರ್ಕ್ ಮಾಡಬೇಕು ಅಂತಲೇ ಶಾಸಕಾಂಗ ಪಕ್ಷದ ಸಭೆ ಕರೆದಿರೋದು ಎಂದರು.
ಅಡ್ಡ ಮತದಾನದ ಭೀತಿನೇ ಇಲ್ಲ.ಏಕೆಂದರೆ ತೋರಿಸಿ ವೋಟ್ ಹಾಕಬೇಕು, ಹಾಗಾಗಿ ಯಾರೂ ಬೇರೆಯವರಿಗೆ ಮತ ಹಾಕಲು ಸಾಧ್ಯವಿಲ್ಲ.. ಅಡ್ಡ ಮತದಾನ ಮಾಡಿದ್ರೆ ಸ್ಪೀಕರ್ಗೆ ದೂರು ನೀಡಿ ಶಾಸಕ ಸ್ಥಾನದಿಂದ ವಜಾ ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.