ಮುಂಬೈ, ಎ28(Daijiworld News/SS): ದೇಶದ ಪ್ರಜೆಯಾಗಿ ನನ್ನ ಕರ್ತವ್ಯವನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಿವುಡ್ ನಟಿ ಉರ್ಮಿಳಾ ಮತೋಂಡ್ಕರ್ ಹೇಳಿದ್ದಾರೆ.
ಭಯದಿಂದ ಕೂಡಿದ ಸಮಾಜದಲ್ಲಿ ನಾವು ಬದುಕುತ್ತಿದ್ದೆೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕರು ಏನಾದರೂ ಒಂದು ಕೆಲಸ ಮಾಡಬೇಕಾದ ಅಗತ್ಯವಿದೆ. ದೇಶದ ಪ್ರಜೆಯಾಗಿ ನನ್ನ ಕರ್ತವ್ಯವನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಆದರೆ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸಿದಾಗ ಸವಾಲು ಕೇಳಿಬಂದಿತ್ತು. ಅದನ್ನು ಸ್ವೀಕರಿಸಿರುವುದಾಗಿ ತಿಳಿಸಿದರು.
ದ್ವೇಷಕಾರಿ ಮನೋಭಾವದ ಜನರ ವಿರುದ್ಧ ಹೋರಾಡುವುದು ನನ್ನ ನಿಲುವಾಗಿದೆ. ಪ್ರಸ್ತುತ ನಾವು ದ್ವೇಷ ಹಾಗೂ ಹಿಂಸಾತ್ಮಕ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ. ಇದರ ವಿರುದ್ಧ ಹೋರಾಟ ನಡೆಸಬೇಕಾದದ್ದು ನನ್ನ ಜವಾಬ್ದಾರಿ ಎನಿಸಿತು. ಏನೇ ಆಗಲಿ ರಾಜಕೀಯದಲ್ಲಿದ್ದು, ಇಂತಹ ವಾತಾವರಣದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ನುಡಿದರು.
ನಾನು ಅಭಿವ್ಯಕ್ತಿ ಸ್ವಾತಂತ್ರವನ್ನು ಬೆಂಬಲಿಸುತ್ತೇನೆ. ನಮ್ಮ ಸಭೆಯೊಂದಕ್ಕೆ ಕೆಲವರು ಅಡ್ಡಿಪಡಿಸಿದ್ದರಿಂದ ಭಯ ಆಯಿತು. ಅದಕ್ಕಾಗಿ ಮೊದಲ ಬಾರಿಗೆ ನನ್ನ ಜೀವಕ್ಕಾಗಿ ಪೊಲೀಸರಿಂದ ರಕ್ಷಣೆ ಕೋರಿದ್ದೇನೆ. ಇಂತಗ ದ್ವೇಷಕಾರಿ ವಾತವಾರಣ ದೇಶದಲ್ಲಿ ಎಷ್ಟುಇದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದು ಹೇಳಿದರು.