ಬೆಂಗಳೂರು, ಮಾ 01 (DaijiworldNews/ AK): ಸಿಎಂ ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ ಎಂದು ಜಾತಿಗಣತಿ ವರದಿ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮುಂದೆ ಏನು ಮಾಡುತ್ತೆ ನೋಡಿ ಕ್ರಮ ಕೈಗೊಳ್ಳುತ್ತೇವೆ. ನಾವೇನು ಸುಮ್ಮನೆ ಕೂರುವುದಿಲ್ಲ. ವೀರಶೈವ ಲಿಂಗಾಯತರು ಉಪ ಜಾತಿ ಸೇರಿ 2 ಕೋಟಿ ಮೇಲಿದ್ದೇವೆ. 9 ವರ್ಷದ ಹಿಂದಿನ ವರದಿ ತಯಾರಿಸಿದ್ದು ಕಾಂತರಾಜು, ಕೊಟ್ಟಿದ್ದು ಜಯಪ್ರಕಾಶ್ ಹೆಗ್ಡೆ ಎಂದರು.
9 ವರ್ಷದ ಹಿಂದಿನ ವರದಿ ಇದನ್ನ ಮೂಲೆಗೆ ಹಾಕಬೇಕು ಎಂದರು. ನಾವು ಎರಡು ಕೋಟಿ ಇದ್ದೇವೆ. ಜಾತಿಗಳ ನಡುವೆ ಸಂಘರ್ಷ ಆಗುತ್ತೆ. ಪುನರ್ ಪರಿಶೀಲನೆಗೆ ಒತ್ತಾಯ ಮಾಡ್ತೀವಿ. ಈಗಲೂ ಅದನ್ನೆ ಹೇಳ್ತೀನಿ ಮನೆಯಲ್ಲೆ ಕುಳಿತು ವರದಿ ಬರೆದಿದ್ದಾರೆ ಎಂದು ಕಿಡಿಕಾರಿದ್ದರು.ಜಾತಿಗಣತಿಯನ್ನ ವೈಜ್ಞಾನಿಕವಾಗಿ ಇನ್ನೊಂದು ಸರಿ ಮಾಡಲಿ ಎಂಬುದು ನಮ್ಮ ಸಮುದಾಯದ ಅಭಿಪ್ರಾಯ ಎಂದು ತಿಳಿಸಿದರು.
ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ? ವರದಿ ಕೊಟ್ಟಿದನ್ನ ಸರ್ಕಾರ ತೆಗೆದುಕೊಂಡಿದ್ದಾರೆ ಮುಂದೆ ನೋಡೋಣ. ಉದ್ದೇಶಪೂರ್ವಕವಾಗಿ ವೀರಶೈವರನ್ನು ಕಡಿಮೆ ತೋರಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದ್ರೆ ಹಾಗೆ ಅನಿಸುತ್ತಿದೆ. ಅವಶ್ಯಕತೆ ಬಂದರೆ ವೀರಶೈವ ಮಹಾಸಭಾದಿಂದ ಖಾಸಗಿ ಜನಗಣತಿ ಮಾಡಿಸುತ್ತೇವೆ. ಈ ವರದಿಯಿಂದ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ. ಇದು ಬೇಕು ಎಂದೇ ಛೂ ಬಿಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದರು.