ಬೆಂಗಳೂರು, ಮಾ 02(DaijiworldNews/SK): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬಾಂಬ್ ಸ್ಫೋಟಕ್ಕೆ ಸಂಭವಿಸಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್ ಅವರು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಣಿಖೆಯನ್ನು ನಡೆಸಲಾಗುತ್ತಿದೆ. ಸಾಕಷ್ಟು ಸಾಕ್ಷ್ಯಧಾರಗಳು ಈಗಾಗಲೇ ಪೋಲಿಸರ ಕೈಸೇರಿದೆ. ನಗರದಲ್ಲಿ 28 ಬಸ್ಗಳು ಓಡಾಡಿವೆ. ಆತ ಬಸ್ ನಲ್ಲಿಯೇ ಬಂದಿರುವ ಸಾಧ್ಯತೆಗಳಿದ್ದು, ಆತ ಸಿಕ್ಕರೆ ಯಾವ ಕಾರಣಕ್ಕೂ ಬಿಡೋದಿಲ್ಲ ಎಂದಿದ್ದಾರೆ.
ಇನ್ನು ರಾಮೇಶ್ವರಂನ ಕೆಫೆಯ ಮಾಲೀಕರು 3-4 ಕಡೆಗಳಲ್ಲಿ ಫ್ರ್ಯಾಂಚೈಸ್ ತೆರೆದು ಯಶಸ್ಸು ಕಾಣುತ್ತಿದ್ದು, ಈ ಕಾರಣಕ್ಕೆ ಹೊಟ್ಟೆ ಉರಿಯಿಂದ ಬಾಂಬ್ ಸ್ಪೋಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅದರ ಬಗ್ಗೆಯೂ ಈ ತನಿಖೆ ಆಗುತ್ತಿದೆ ಎಂದು ತಿಳಿಸಿದ್ದಾರೆ.