ಕಲಬುರಗಿ,ಏ28(DaijiworldNews/AZM): ಊಟ ಮಾಡುತ್ತಿದ್ದ ವೇಳೆ ಅನ್ನದ ಜೊತೆ ಸೇರಿ ಹೋದ ಪಿನ್ ಅನ್ನು ನುಂಗಿ ಬಾಲಕಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಹುಯ್ಯಾಳ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಸ್ಪಪ್ನಾ ಎಂದು ಗುರುತಿಸಲಾಗಿದೆ. ಏಪ್ರಿಲ್ 22 ಅನ್ನದ ಜೊತೆ ಬಾಲಕಿ ಪಿನ್ನನ್ನು ನುಂಗಿದ್ದು, ತಕ್ಷಣ ಆಕೆಯನ್ನು ಹೈದರಾಬಾದ್ ನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಇಂದು ಮೃತಪಟ್ಟಿದ್ದಾಳೆ.